ವಿಡಿಯೋ: ಉಗ್ರರು ಕದ್ದು ಕೂತಿದ್ದ ಟ್ರಕ್​ನನ್ನೇ ಸ್ಫೋಟಿಸಿದ ಭಾರತೀಯ ಸೇನೆ..!

masthmagaa.com:

ಗಡಿ ನುಸುಳಿ ಜಮ್ಮು-ಕಾಶ್ಮೀರದ ಶ್ರೀನಗರದ ಕಡೆ ಬರುತ್ತಿದ್ದ ನಾಲ್ವರು ಉಗ್ರರನ್ನ ಸಿಆರ್​ಪಿಎಫ್​ ಯೋಧರು ಮತ್ತು ಪೊಲೀಸರು ಹೊಡೆದುರುಳಿಸಿದ್ದಾರೆ. ಸಾಂಬಾ ಸೆಕ್ಟರ್​​ನಿಂದ ಹೊರಟಿದ್ದ ಟ್ರಕ್​ನಲ್ಲಿ ಉಗ್ರರು ಶ್ರೀನಗರದ ಕಡೆ ಬರುತ್ತಿದ್ದಾರೆ ಅನ್ನೋ ಮಾಹಿತಿ ಭದ್ರತಾ ಪಡೆಗಳಿಗೆ ಸಿಕ್ಕಿತ್ತು. ಈ ಹಿನ್ನೆಲೆ ನಗ್ರೋಟಾ ಬಳಿಯ ಬನ್ ಟೋಲ್ ಪ್ಲಾಝಾ ಬಳಿ ಟ್ರಕ್​ ನಿಲ್ಲಿಸಿ ತಪಾಸಣೆಗೆ ಮುಂದಾದಾಗ ಅದರಲ್ಲಿದ್ದ ಉಗ್ರರು ಯೋಧರ ಕಡೆಗೆ ಗ್ರನೇಡ್ ದಾಳಿ ನಡೆಸಿದ್ದಾರೆ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಭಾರತೀಯ ಭದ್ರತಾ ಪಡೆಗಳು ಉಗ್ರರನ್ನ ಹೊಡೆದುರುಳಿಸಿ, ಟ್ರಕ್​ನನ್ನ ಸ್ಫೋಟಿಸಿದೆ. ನಾಲ್ವರು ಉಗ್ರರು ಕೂಡ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವರು ಅನ್ನೋದು ಗೊತ್ತಾಗಿದೆ. ಉಗ್ರರ ಬಳಿ ಇದ್ದ ಒಟ್ಟು 11 AK-47 ರೈಫಲ್​ಗಳನ್ನ ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ವೇಳೆ ಓರ್ವ ಕಾನ್​ಸ್ಟೇಬಲ್​ಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

-masthmagaa.com

Contact Us for Advertisement

Leave a Reply