ಇನ್ಮುಂದೆ 24×7 ಲಸಿಕೆ: ಆರೋಗ್ಯ ಸಚಿವ ಹರ್ಷವರ್ಧನ್

masthmagaa.com:

ದೆಹಲಿ: ಆಸ್ಪತ್ರೆಗಳು ನಿಗದಿತ ಸಮಯದಲ್ಲೇ ಲಸಿಕೆ ಹಾಕಬೇಕು ಅಂತೇನೂ ಇಲ್ಲ.. ದಿನದ 24 ಗಂಟೆ ಯಾವಾಗ ಬೇಕಾದ್ರೂ ಲಸಿಕೆ ಹಾಕಬಹುದು ಅಂತ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ.

ಲಸಿಕೆ ಅಭಿಯಾನದ ಬಗ್ಗೆ ಮಾಧ್ಯಮವೊಂದಕ್ಕೆ ಮಾತನಾಡಿರುವ ಅವರು, ಲಸಿಕೆ ಹಾಕುವ ಸಂಬಂಧ ನಿಗದಿಪಡಿಸಲಾಗಿದ್ದ ಸಮಯವನ್ನು ಕೇಂದ್ರ ಸರ್ಕಾರ ತೆಗೆದು ಹಾಕಿದೆ. ಹೀಗಾಗಿ ದಿನದಂತ್ಯದಲ್ಲಿ ಲಸಿಕೆ ಹಾಕುವ ಪ್ರಕ್ರಿಯೆಯನ್ನು ಮುಂದುವರಿಸಬಹುದು. ಅಥವಾ ಬೆಳಗ್ಗೆ ಬೇಗನೇ ಲಸಿಕೆ ಹಾಕಲು ಶುರು ಮಾಡಬಹುದು. ಹೀಗೆ ಮಾಡಿದ್ರೆ ಲಸಿಕೆ ಅಭಿಯಾನ ವೇಗ ಪಡೆದುಕೊಳ್ಳುತ್ತೆ.. ಹೆಚ್ಚಿನ ಜನ ಕೊರೋನಾದಿಂದ ಬಚಾವ್ ಆಗಲು ಸಾಧ್ಯವಾಗುತ್ತೆ ಅಂತ ಅಭಿಪ್ರಾಯಪಟ್ಟಿದ್ದಾರೆ.

ನಾವೀಗ ಬಿಡುಗಡೆ ಮಾಡಿರುವ ಕೋವಿನ್ ಆ್ಯಪ್​ ಮತ್ತು ವೆಬ್​ಸೈಟ್​​​ನಲ್ಲೂ ಕೂಡ ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ಅನ್ನೋ ಟೈಂ ಲಿಮಿಟ್ ಫಿಕ್ಸ್ ಮಾಡಿಲ್ಲ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ತಮಗೆ ಎಷ್ಟು ಸಾಧ್ಯವಾಗುತ್ತೋ ಅಷ್ಟು ಸಮಯದವರೆಗೆ ಲಸಿಕೆ ಹಾಕಬಹುದು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply