ಘೋರ ಕಲಿಯುಗದಲ್ಲಿ ಕೊರೋನಾ ವಿರುದ್ಧ ಹೋರಾಟ ಸಾಧ್ಯವಿಲ್ಲ: ಸುಪ್ರೀಂಕೋರ್ಟ್​ ಜಡ್ಜ್​​​​

masthmagaa.com:

ದೆಹಲಿ: ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ಕೊರೋನಾ ವೈರಸ್​​​ಗೆ ವಿಶಿಷ್ಠ ವ್ಯಾಖ್ಯಾನ ಮಾಡಿದ್ದಾರೆ. ಚೀನಾ ಕಾಯಿಲೆ ಹಿನ್ನೆಲೆಯಲ್ಲಿ ಕೋರ್ಟ್​ ಕಲಾಪಗಳನ್ನು ಮಹತ್ವದ ಪ್ರಕರಣಗಳಿಗೆ ಮಾತ್ರವೇ ಸೀಮಿತಗೊಳಿಸಿರುವುದರ ಬಗ್ಗೆ ವಕೀಲರೊಬ್ಬರು ಪ್ರಶ್ನಿಸಿದ್ರು. ಈ ವೇಳೆ ಉತ್ತರಿಸಿದ ನ್ಯಾಯಮೂರ್ತಿ ಅರುಣ್ ಮಿಶ್ರಾ, ಇಂಥ ಮಹಾಮಾರಿ ಕಾಯಿಲೆಗಳು ಪ್ರತಿ 100 ವರ್ಷಕ್ಕೊಮ್ಮೆ ಬರುತ್ತವೆ. ಈ ಘೋರ ಕಲಿಯುಗದಲ್ಲಿ ನಾವು ವೈರಸ್ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಮಾನವರ ದೌರ್ಬಲ್ಯವನ್ನು ನೋಡಿ.. ನಾವು ಎಲ್ಲವನ್ನೂ ಮಾಡಬಹುದು. ಎಲ್ಲಾ ಶಸ್ತ್ರಾಸ್ತ್ರಗಳನ್ನು ರೂಪಿಸಬಹುದು. ಆದ್ರೆ ಈ ಕಾಯಿಲೆ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಕಾಯಿಲೆ ವಿರುದ್ಧ ಪ್ರತಿಯೊಬ್ಬರು ಹೋರಾಡಬೇಕು. ಕೇವಲ ಸರ್ಕಾರ ಮಾತ್ರವಲ್ಲ. ನಾವೆಲ್ಲರೂ ನಮ್ಮದೇ ಮಟ್ಟದಲ್ಲಿ ಹೋರಾಟ ನಡೆಸಿದರೆ ಮಹಾಮಾರಿಯಿಂದ ಹೊರಬರಬಹುದು ಎಂದಿದ್ದಾರೆ.

-masthmagaa.com

Contact Us for Advertisement

Leave a Reply