masthmagaa.com:

ಸತತ ಮೂರು ದಿನಗಳಿಂದ ಕಡಿಮೆಯಾಗುತ್ತಾ ಹೋಗಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಶುಕ್ರವಾರ ಏರಿಕೆ ಕಂಡಿದೆ. 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 242 ರೂಪಾಯಿ ಜಾಸ್ತಿಯಾಗಿ 50,905 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 260 ರೂಪಾಯಿ ಜಾಸ್ತಿಯಾಗಿ 49,170 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 1,399‬ ರೂಪಾಯಿ ಜಾಸ್ತಿಯಾಗಿ 61,558 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್​ ಒಳಗೊಂಡಿರುವುದಿಲ್ಲ.

ಇನ್ನು ಗುರುವಾರ ಸಾವಿರಕ್ಕೂ ಅಧಿಕ ಅಂಕಗಳ ಕುಸಿತ ಕಂಡಿದ್ದ ಷೇರುಪೇಟೆ ಶುಕ್ರವಾರ ಚೇತರಿಕೆ ಕಂಡಿದೆ. ಸಂವೇದಿ ಸೂಚ್ಯಂಕ 255 ಅಂಕ ಏರಿಕೆ ಕಂಡು 39,983ರಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 82 ಅಂಕ ಏರಿಕೆ ಕಂಡು 11,762 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ ಕೇವಲ 1 ಪೈಸೆ ಗಳಿಕೆ ಕಂಡು 73 ರೂಪಾಯಿ 35 ಪೈಸೆ ಆಗಿದೆ.

-masthmagaa.com

Contact Us for Advertisement

Leave a Reply