ಬೆಂಗಳೂರಿನ ಗೂಗಲ್ ಉದ್ಯೋಗಿಗೂ ಅಂಟಿತು ಕೊರೋನಾ ವೈರಸ್..!

masthmagaa.com:

ಕೊರೋನಾ ವೈರಸ್​ನಿಂದ ಕಲಬುರಗಿಯ ವೃದ್ಧ ಮೃತಪಟ್ಟಿರುವ ಬೆನ್ನಲ್ಲೇ ಬೆಂಗಳೂರಿನ ಗೂಗಲ್ ಉದ್ಯೋಗಿಯೋರ್ವರಿಗೆ ಕೊರೋನಾ ವೈರಸ್​ ತಗುಲಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ. ಇದನ್ನು ಖಚಿತಪಡಿಸಿರುವ ಗೂಗಲ್ ಸಂಸ್ಥೆ, ಕೊರೋನಾ ಟೆಸ್ಟ್​ನಲ್ಲಿ ತನ್ನ ಸಿಬ್ಬಂದಿಗೆ ಪಾಸಿಟಿವ್ ಫಲಿತಾಂಶ ಬಂದಿದೆ ಎಂದಿದೆ. ಹೀಗಾಗಿ ಎಲ್ಲಾ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಆದೇಶಿಸಿದೆ.

ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಅನಾರೋಗ್ಯಕ್ಕೆ ತುತ್ತಾಗಿದ್ದ ಉದ್ಯೋಗಿಯನ್ನ ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ನಡೆಸಲಾಯಿತು. ಈ ವೇಳೆ ಕೋವಿಡ್-19 ಪಾಸಿಟಿವ್ ಫಲಿತಾಂಶ ಬಂದಿದೆ. ಈ ಹಿನ್ನೆಲೆ ಕಚೇರಿಯ ಎಲ್ಲಾ ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್‌ಗೆ ಆದೇಶ ನೀಡಿರುವ ಗೂಗಲ್ ಸಂಸ್ಥೆ, ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೇಳಿದೆ.

-masthmagaa.com

Contact Us for Advertisement

Leave a Reply