masthmagaa.com:

ದೇಶದಲ್ಲಿ ಕೊರೋನಾ ಲಸಿಕೆ ಯಾವಾಗ ಬರುತ್ತೆ ಅಂತ ಎಲ್ಲರೂ ಕಾಯ್ತಿದ್ದೀವಿ. ಹಂತ ಹಂತವಾಗಿ ಎಲ್ಲರಿಗೂ ಲಸಿಕೆ ಹಾಕಲಾಗುತ್ತೆ ಅಂತಾನೇ ಅಂದುಕೊಂಡಿದ್ದೀವಿ. ಆದ್ರೆ ಎಲ್ಲರಿಗೂ ಲಸಿಕೆ ಹಾಕೋದು ಅನುಮಾನ. ಇವತ್ತು ಸುದ್ದಿಗೋಷ್ಠಿ ನಡೆಸಿದ ಐಸಿಎಂಆರ್ ಮತ್ತು ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ‘ದೇಶದ ಎಲ್ಲಾ ಜನತೆಗೂ ಲಸಿಕೆ ಹಾಕುವ ಬಗ್ಗೆ ಸರ್ಕಾರ ಯಾವತ್ತೂ ಮಾತನಾಡಿಲ್ಲ. ಕೊರೋನಾಗೆ ಹೆಚ್ಚು ಅಪಾಯಕಾರಿ ಎನಿಸಿಕೊಂಡಿರುವ ವರ್ಗಕ್ಕೆ ಲಸಿಕೆ ಹಾಕಿ, ಕೊರೋನಾ ಹರಡುವಿಕೆಯ ಸರಪಳಿಯನ್ನ ಮುರಿಯಲು ಸಾಧ್ಯವಾದ್ರೆ ಇಡೀ ದೇಶದ ಜನತೆಗೆ ಲಸಿಕೆ ಹಾಕಬೇಕಾದ ಅವಶ್ಯಕತೆ ಇಲ್ಲ’ ಅಂತ ಐಸಿಎಂಆರ್ ಹೇಳಿದೆ. ನಮ್ಮ ಉದ್ದೇಶ ಕೊರೋನಾ ಹರಡುವಿಕೆಯ ಸರಪಳಿಯನ್ನ ಕಟ್ ಮಾಡೋದು ಅಂತಾನೂ ಐಸಿಎಂಆರ್ ಹೇಳಿದೆ.

-masthmagaa.com

Contact Us for Advertisement

Leave a Reply