3 ಕೃಷಿ ಕಾನೂನು: ಒಂದು ಹೆಜ್ಜೆ ಹಿಂದೆ ಇಡುತ್ತಾ ಕೇಂದ್ರ ಸರ್ಕಾರ?

masthmagaa.com:

3 ಕೃಷಿ ಕಾನೂನುಗಳನ್ನ ವಾಪಸ್​ ಪಡೆಯೋವರಿಗೆ ಪ್ರತಿಭಟನೆಯಿಂದ ಹಿಂದೆ ಸರಿಯಲ್ಲ ಅಂತ ಹೇಳ್ತಿದ್ದ ರೈತರು ಮತ್ತು ಕಾನೂನುಗಳನ್ನ ವಾಪಸ್ ಪಡೆಯಲ್ಲ ಅಂತ ಹೇಳ್ತಿದ್ದ ಕೇಂದ್ರ ಸರ್ಕಾರ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ನಿನ್ನೆ ನಡೆದ ಸಭೆಯಲ್ಲಿ ಬ್ರೇಕ್​ಥ್ರೂ ಸಿಕ್ಕಂತೆ ಕಾಣ್ತಿದೆ. ರೈತರು ಪಟ್ಟು ಬಿಡದ ಹಿನ್ನೆಲೆ ಒಂದು ಹೆಜ್ಜೆ ಹಿಂದೆ ಸರಿದಿರುವ ಕೇಂದ್ರ ಸರ್ಕಾರ 3 ಕೃಷಿ ಕಾನೂನುಗಳನ್ನ ಒಂದೂವರೆ ಅಥವಾ ಎರಡು ವರ್ಷಗಳ ಕಾಲ ಅಮಾನತಿನಲ್ಲಿ ಇಡುವ ಬಗ್ಗೆ ರೈತ ಸಂಘಟನೆಗಳ ಮುಂದೆ ಪ್ರಸ್ತಾವ ಇಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ರೈತರಿಗೆ ಗ್ಯಾರಂಟಿ ಕೊಡೋಕೆ ಸುಪ್ರೀಂಕೋರ್ಟ್​ಗೆ ಅಫಿಡವಿಟ್​ ಸಲ್ಲಿಸಲು ಸರ್ಕಾರ ಮುಂದಾಗಿದೆ ಅಂತ ನಿನ್ನೆಯ ಸಭೆಯಲ್ಲಿ ಭಾಗವಹಿಸಿದ ರೈತ ಮುಖಂಡರೊಬ್ರು ಹೇಳಿದ್ದಾರೆ. ಈ ಒಂದೂವರೆ ಅಥವಾ ಎರಡು ವರ್ಷದ ಅವಧಿಯಲ್ಲಿ ಸಮಿತಿಯನ್ನ ರಚಿಸಿ, ಆ ಸಮಿತಿ ಏನು ಹೇಳುತ್ತೋ ಅದನ್ನ ಮಾಡೋಕೆ ಕೇಂದ್ರ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಈ ಪ್ರಪೋಸಲ್​ ಬಗ್ಗೆ ಎಲ್ಲಾ ರೈತ ಸಂಘಟನೆಗಳ ಜೊತೆ ಚರ್ಚಿಸಿ ತಮ್ಮ ತೀರ್ಮಾನ ತಿಳಿಸ್ತೀವಿ ಅಂತ ರೈತರು ಹೇಳಿದ್ದಾರೆ. ನಾಳೆ ರೈತ ಮುಖಂಡರು ಮತ್ತು ಕೇಂದ್ರ ಸರ್ಕಾರ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಈ ಸಭೆಯಲ್ಲಿ ಹೊಸ ಪ್ರಪೋಸಲ್​ ಬಗ್ಗೆ ಸ್ಪಷ್ಟ ನಿರ್ಧಾರ ಹೊರಬರುವ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply