ಹಾರ್ದಿಕ್ ಪಾಂಡ್ಯ ಬೇಬಿ ಸ್ಟೆಪ್ ಹೇಗಿದೆ ನೋಡಿ…

ಬೆನ್ನುಭಾಗದ ಸರ್ಜರಿ ಬಳಿಕ ಭಾರತದ ಆಲ್‍ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ಚೇತರಿಸಿಕೊಳ್ತಿದ್ದಾರೆ. ಇಂಗ್ಲೆಂಡ್‍ನಲ್ಲಿರುವ ಪಾಂಡ್ಯಾಗೆ ಈ ಹಿಂದೆ 2018 ಮತ್ತು 2019ರಲ್ಲಿ ಚಿಕಿತ್ಸೆ ನೀಡಿದ್ದ ವೈದ್ಯರೇ ಈಗಲೂ ಚಿಕಿತ್ಸೆ ನೀಡುತ್ತಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಟಿ-20 ಸರಣಿಯ ಅಂತಿಮ ಪಂದ್ಯದಲ್ಲಿ ಪಾಂಡ್ಯ ಗಾಯಗೊಂಡಿದ್ದರು.

ಈಗ ಟ್ವಿಟ್ಟರ್‍ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರೋ ಹಾರ್ದಿಕ್ ಪಾಂಡ್ಯ, ಮಕ್ಕಳ ನಡಿಗೆ.. ಇಲ್ಲಿಂದ ಸಂಪೂರ್ಣವಾಗಿ ನನ್ನ ಫಿಟ್ನೆಸ್ ಹಾದಿ ಶುರುವಾಗಲಿದೆ. ನನ್ನನ್ನು ಬೆಂಬಲಿಸಿ, ಶುಭಹಾರೈಸಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ. ಜೊತೆಗೆ ಈ ವಿಡಿಯೋದಲ್ಲಿ ಹಾರ್ದಿಕ್ ಪಾಂಡ್ಯ ನಿಧಾನವಾಗಿ ನಡೆಯುತ್ತಿದ್ದಾರೆ. ಪಕ್ಕದಲ್ಲಿ ವೈದ್ಯರು ನಿಂತು ಸಪೋರ್ಟ್ ಮಾಡ್ತಿದ್ದಾರೆ. ವಿಡಿಯೋದ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ವ್ಹೀಲ್ ಚೇರ್‍ನಲ್ಲಿ ಕುಳಿತಿದ್ದಾರೆ.

ಸದ್ಯ ಸೌತ್ ಆಫ್ರಿಕ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿರುವ ಹಾರ್ದಿಕ್ ಪಾಂಡ್ಯ, ನವೆಂಬರ್ 3ರಂದು ಆರಂಭವಾಗುವ ಬಾಂಗ್ಲಾದೇಶ ವಿರುದ್ಧದ ಟಿ-20ಯಿಂದಲೂ ದೂರ ಉಳಿಯಲಿದ್ದಾರೆ.

Contact Us for Advertisement

Leave a Reply