masthmagaa.com:

  • ನಾವು ಅನ್​ಲಾಕ್​ 2.Oಗೆ ಪ್ರವೇಶಿಸುತ್ತಿದ್ದೇವೆ. ಮತ್ತೊಂದುಕಡೆ ಶೀತ, ಕೆಮ್ಮು, ಜ್ವರದ ಸೀಸನ್ ಕೂಡ ಶುರುವಾಗುತ್ತಿದೆ. ಹೀಗಾಗಿ ದೇಶದ ಜನ ಜಾಗ್ರತೆ ವಹಿಸುವಂತೆ ನಾನು ಕೇಳಿಕೊಳ್ಳುತ್ತೇನೆ.
  • ಕೊರೋನಾ ವಿರುದ್ಧದ ಹೋರಾಟದಲ್ಲಿ ವಿಶ್ವದ ಇತರ ರಾಷ್ಟ್ರಗಳನ್ನು ಹೋಲಿಸಿದ್ರೆ ನಮ್ಮ ದೇಶ ಉತ್ತಮ ಸ್ಥಿತಿಯಲ್ಲಿದೆ. ಸಮಯಕ್ಕೆ ಸರಿಯಾಗಿ ತೆಗೆದುಕೊಂಡ ನಿರ್ಧಾರಗಳು ನಿರ್ಣಾಯಕ ಪಾತ್ರ ವಹಿಸಿವೆ.
  • ಆರಂಭದಲ್ಲಿ ಕೊರೋನಾ ಕಾಣಿಸಿಕೊಂಡಾಗ ಜನ ತುಂಬಾ ಜಾಗ್ರತೆಯಿಂದ ಇದ್ದರು. ಆದ್ರೆ ಅನಲಾಕ್​ 1.O ಸಂದರ್ಭದಲ್ಲಿ ಕೆಲವರು ನಿರ್ಲಕ್ಷ್ಯ ವಹಿಸಿದ್ದಾರೆ. ಈಗ ಮೊದಲಿಗಿಂತಲೂ ಹೆಚ್ಚು ಜಾಗ್ರತೆಯಿಂದ ಇರಬೇಕಾದ ಅವಶ್ಯಕತೆ ಇದೆ.
  • ಎಲ್ಲರೂ ನಿಯಮಗಳನ್ನು ಪಾಲಿಸಬೇಕು. ಜನಪ್ರತಿನಿಧಿಗಳಿಂದ ಹಿಡಿದು ಜನ ಸಾಮಾನ್ಯರವರೆಗೆ ಎಲ್ಲರಿಗೂ ನಿಯಮ ಅನ್ವಯವಾಗುತ್ತದೆ. ಹೀಗಾಗಿ ನಿಯಮ ಪಾಲಿಸದವರ ವಿರುದ್ಧ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಬೇಕು. 130 ಕೋಟಿ ಜನರ ರಕ್ಷಣೆಯ ಜವಾಬ್ದಾರಿ ನಮ್ಮ ಮೇಲಿದೆ.
  • ಲಾಕ್​ಡೌನ್ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿ 80 ಕೋಟಿ ಜನರಿಗೆ ಮೂರು ತಿಂಗಳ ಪಡಿತರವನ್ನು ಉಚಿತವಾಗಿ ನೀಡಿದ್ದೇವೆ. ಇದನ್ನು ಈ ವರ್ಷದ ನವೆಂಬರ್ ತಿಂಗಳವರೆಗೆ ವಿಸ್ತರಿಸುತ್ತಿದ್ದೇವೆ. ಇದರ ಅರ್ಥ ಅಮೆರಿಕ ಜನಸಂಖ್ಯೆಗಿಂತ ಎರಡೂವರೆ ಪಟ್ಟು ಹೆಚ್ಚು, ಬ್ರಿಟನ್​ ಜನಸಂಖ್ಯೆಗಿಂತ 12 ಪಟ್ಟು ಹೆಚ್ಚು ಜನರಿಗೆ ಉಚಿತ ಪಡಿತರ ಸಿಗಲಿದೆ. ಇದಕ್ಕಾಗಿ ಹೆಚ್ಚುವರಿ 90,000 ಕೋಟಿ ರೂಪಾಯಿ ವೆಚ್ಚವಾಗಲಿದೆ.
  • ಇಂಥ ಸಂದರ್ಭದಲ್ಲಿ ದೇಶದ ರೈತರು ಮತ್ತು ಸರಿಯಾದ ಸಮಯಕ್ಕೆ ತೆರಿಗೆ ಪಾವತಿ ಮಾಡಿದವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ.
  • ಆರ್ಥಿಕ ಚಟುವಟಿಕೆಗಳನ್ನ ಮತ್ತಷ್ಟು ಮುಂದಕ್ಕೆ ತೆಗೆದುಕೊಂಡು ಹೋಗೋಣ. ಆತ್ಮ ನಿರ್ಭರ್ ಭಾರತವನ್ನು ನಿರ್ಮಾಣ ಮಾಡೋಣ. ವೋಕಲ್ ಫಾರ್ ಲೋಕಲ್ ಅಂದ್ರೆ ಸ್ವದೇಶಿ ವಸ್ತುಗಳನ್ನು ಹೆಚ್ಚೆಚ್ಚು ಪ್ರಚಾರ ಮಾಡೋಣ.
  • ಕೆಲಸ ಮಾಡುವುದರ ಜೊತೆ ಜೊತೆಗೆ ಮುಂದಕ್ಕೆ ಹೆಜ್ಜೆ ಇಡೋಣ. ಎರಡು ಗಜ ಅಂತ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ, ಎಚ್ಚರ ತಪ್ಪಬೇಡಿ.

-masthmagaa.com

Contact Us for Advertisement

Leave a Reply