ಹಾಂಕಾಂಗ್​​ನಲ್ಲಿ ಜಿನ್​ಪಿಂಗ್ ಮಾಧ್ಯಮ ಸಂಹಾರ ಆರಂಭ!

masthmagaa.com:

ಚೀನಾ ಇತ್ತೀಚಿಗಷ್ಟೇ ಪೂರ್ತಿಯಾಗಿ ಕಬಳಿಸಿರೋ ಹಾಂಕಾಂಗ್ ನ ಚೀಫ್ ಎಕ್ಸೆಟಿವ್ ಕ್ಯಾರಿ ಲ್ಯಾಮ್ ಮುಂದಿನ ದಿನಗಳು ಹಾಂಕಾಂಗ್ ಗೆ ಹೇಗಿರಲಿವೆ ಅನ್ನೋ ಸ್ಪಷ್ಟ ಸಂಕೇತ ರವಾನೆ ಮಾಡಿದ್ದಾರೆ. ಹಾಂಕಾಂಗ್ ಮೀಡಿಯಾಗಳು ಸರ್ಕಾರದ ಶಕ್ತಿ ಹಾಗೂ ಅಧಿಕಾರವನ್ನ ಕಡೆಗಣಿಸಬಾರದು ಅಂತ ಹೇಳಿದ್ದಾರೆ. ಹಾಂಕಾಂಗ್ನ ಅತಿದೊಡ್ಡ ಪ್ರಜಾಪ್ರಭುತ್ವ ಪರ ಪತ್ರಿಕೆಯಾಗಿದ್ದ ಆಪಲ್ ಡೈಲಿ ಮೇಲಿನ ರೇಡ್ ಬಳಿಕ ಈ ಹೇಳಿಕೆ ಬಂದಿದೆ. ಆಪಲ್ ಡೇಲಿ ಆಫೀಸ್ ಗೆ ನೂರಾರು ಪೊಲೀಸರ ಟೀಮು ಅಂಪಾದ ಸೇರಿ ಹಲವರನ್ನ ಬಂಧಿಸಿದೆ. ಹಾರ್ಡ್ ಡಿಸ್ಕ್ ಗಳನ್ನ ಸೀಝ್ ಮಾಡಿದ್ದಾರೆ. ಆಪಲ್ ಡೈಲಿ ಪತ್ರಿಕೆಯ ಬ್ಯಾಂಕ್ ಅಕೌಂಟ್ ಗಳನ್ನ ಫ್ರೀಜ್ ಮಾಡಿದೆ. ಇನ್ನೊಂದು ವಾರದ ಬಳಿಕೆ ಆಪಲ್ ಡೈಲಿ ಕೆಲಸ ಮಾಡಲು ಸಾಧ್ಯವಾಗದಂತೆ ಎಲ್ಲ ಕ್ರಮಗಳನ್ನ ಕೈಗೊಂಡಿದೆ. ಇದರ ಪರಿಣಾಮ 20ನೇ ಆನಿವರ್ಸರಿ ಸಂಭ್ರಮದಲ್ಲಿದ್ದ ಆಪಲ್ ಡೇಲಿ ಶಟ್ ಡೌನ್ ಆಗೋ ಹಂತಕ್ಕೆ ಬಂದಿದೆ. ಚೀನಾದ ಜಿನ್ ಪಿಂಗ್ ಸರ್ವಾಧಿಕಾರ ಪ್ರಶ್ನಿಸಿದ್ದಕ್ಕೆ ಈ ಮಾಧ್ಯಮ ಸಂಸ್ಥೆಗೆ ಈ ರೀತಿಯಾಗಿದೆ. ಇದಕ್ಕೂ ಮೊದಲು ಇದರ ಮಾಲೀಕ ಜಿಮ್ಮಿ ಲಾಯ್ ರನ್ನ ಬಂಧಿಸಿ ಜೈಲಿಗೆ ಹಾಕಲಾಗಿತ್ತು. ಹೊಸ ನ್ಯಾಶನಲ್ ಸೆಕ್ಯೂರಿಟಿ ಲಾ ಅಡಿಯಲ್ಲಿ ಅವರಿಗೆ 20 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.

-masthmagaa.com

Contact Us for Advertisement

Leave a Reply