masthmagaa.com:

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನ ಐಸಿಸಿ ಒಂಡೇ ಕ್ರಿಕೆಟರ್ ಆಫ್​ ದಿ ಡಿಕೇಡ್​ (ದಶಕದ ಒಂಡೇ ಕ್ರಿಕೆಟಿಗ) ಅಂತ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಹೆಸರಿಸಿದೆ. ಪ್ರಶಸ್ತಿ ಅವಧಿಯಲ್ಲಿ ಏಕದಿನ ಕ್ರಿಕೆಟ್​ನಲ್ಲಿ 10,000 ರನ್​ ಪೂರೈಸಿದ ಏಕೈಕ ಆಟಗಾರ ಅಂತಾನೂ ಐಸಿಸಿ ತಿಳಿಸಿದೆ. ಇದರ ಜೊತೆಗೆ ‘ಸರ್ ಗಾರ್​ಫೀಲ್ಡ್​ ಸೋಬರ್ಸ್​ ಅವಾರ್ಡ್ ಫಾರ್ ಐಸಿಸಿ ಮೇಲ್ ಕ್ರಿಕೆಟರ್ ಆಫ್​ ದಿ ಡಿಕೇಡ್​’ ಪ್ರಶಸ್ತಿಯನ್ನ ವಿರಾಟ್​ ಕೊಹ್ಲಿಯೇ ಗೆದ್ದುಕೊಂಡಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್​. ಧೋನಿಗೆ ‘ಐಸಿಸಿ ಸ್ಪಿರಿಟ್​ ಆಫ್​ ಕ್ರಿಕೆಟ್​ ಆಫ್​ ದಿ ಡಿಕೇಡ್​’ ಪ್ರಶಸ್ತಿ ಸಿಕ್ಕಿದೆ. 2011ರ ನಾಟಿಂಗಮ್ ಟೆಸ್ಟ್​ನಲ್ಲಿ ಇಂಗ್ಲೆಂಡ್​ ಬ್ಯಾಟ್ಸ್​ಮನ್ ಇಯಾನ್ ಬೆಲ್ ಬಾಲ್​​ ಡೆಡ್ ಆಗೋಕೂ ಮುಂಚೆಯೇ ಕ್ರೀಸ್ ಬಿಟ್ಟು ಹೋಗಿ ಔಟಾಗಿದ್ರು. ಬಳಿಕ ಇಂಗ್ಲೆಂಡ್ ತಂಡದ ನಾಯಕ ಮತ್ತು ಕೋಚ್ ಬಂದು ರನೌಟ್​ ಡಿಸಿಷನ್ ಬದಲಾಯಿಸಬಹುದಾ ಅಂತ ಧೋನಿ ಬಳಿ ಕೇಳಿದ್ರು. ಇದಕ್ಕೆ ಪ್ರವಾಸಿ ಭಾರತ ತಂಡ ಒಪ್ಪಿಕೊಂಡಿತ್ತು. ಇದಕ್ಕಾಗಿ ಧೋನಿಗೆ ಈ ಪ್ರಶಸ್ತಿ ಸಿಕ್ಕಿದೆ. ಇನ್ನುಳಿದಂತೆ ಆಫ್ಘನಿಸ್ತಾನದ ರಶೀದ್ ಖಾನ್ ಐಸಿಸಿ ಟಿ-20 ಕ್ರಿಕೆಟರ್ ಆಫ್ ದಿ ಡಿಕೇಡ್ ಪ್ರಶಸ್ತಿ ಗೆದ್ರೆ, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಐಸಿಸಿ ಟೆಸ್ಟ್ ಕ್ರಿಕೆಟರ್ ಆಫ್​ ದಿ ಡಿಕೇಡ್​ ಪ್ರಶಸ್ತಿಯನ್ನ ಬಾಚಿಕೊಂಡಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಆಸ್ಟ್ರೇಲಿಯಾದ ಎಲೀಸ್​ ಪೆರ್ರಿಗೆ ಒಂಡೇ ಮತ್ತು ಟಿ-20 ಕ್ರಿಕೆಟರ್ ಆಫ್ ಡಿಕೇಡ್ ಪ್ರಶಸ್ತಿ ಸಿಕ್ಕಿದೆ.

 

-masthmagaa.com

Contact Us for Advertisement

Leave a Reply