ಭಾರತದಲ್ಲಿ 7,569 ಬಗೆಯ ಕೊರೋನಾ ಪತ್ತೆ!

masthmagaa.com:

ವುಹಾನ್​ನಲ್ಲಿ ಹುಟ್ಟಿದ ಕೊರೋನಾ ವೈರಸ್ ಇಡೀ ವಿಶ್ವದಲ್ಲಿ ಸಾವಿರಾರು ತಳಿಗಳಲ್ಲಿ ಬದಲಾಗಿ, ಕಾಟ ಕೊಡ್ತಾ ಇದೆ. ಅವುಗಳಲ್ಲಿ ಹಲವು ಥಳಿಗಳು ಮಾರಕವೂ ಆಗಿವೆ.. ಈ ನಡುವೆ ಭಾರತವೊಂದರಲ್ಲೇ ಕೊರೋನಾ ಈವರೆಗೆ 7569 ಬಾರಿ ರೂಪಾಂತರಗೊಂಡಿದೆ ಅಂತ ಅಧ್ಯಯನವೊಂದರಿಂದ ತಿಳಿದು ಬಂದಿದೆ. ಸಿಸಿಎಂಬಿ ಸೆಂಟರ್ ಫರ್ ಸೆಲ್ಯೂಲರ್ & ಮಲೆಕ್ಯೂಲರ್ ಬಯಾಲಜಿಯ ವಿಜ್ಞಾನಿಗಳ ಗುಂಪು ಈ ಅಧ್ಯಯನ ನಡೆಸಿದ್ದು, ಈಗಾಗಲೇ 5 ಸಾವಿರ ಥಳಿಗಳ ವಿಕಸನದ ಕುರಿತು ವಿಶ್ಲೇಷಣೆ ನೀಡಿದ್ದಾರೆ.

ಆದ್ರೆ ಭಾರತದಲ್ಲಿ ಪತ್ತೆಯಾದ ವಿವಿಧ ಥಳಿಗಳು ಕಡಿಮೆ ಹರಡುವಿಕೆಯ ಸಾಮರ್ಥ್ಯವನ್ನು ಹೊಂದಿದ್ದು, ಬೇರೆ ದೇಶಗಳನ್ನು ಕಾಡುತ್ತಿರುವ ಹೊಸ ಥಳಿಗಳಂತೆ ಮಾರಕವಾಗಿಲ್ಲ ಅಂತ ಕೂಡ ತಜ್ಞರು ಮಾಹಿತಿ ನೀಡಿದ್ದಾರೆ. ಮತ್ತೊಂದ್ಕಡೆ ದೇಶದ 5 ರಾಜ್ಯಗಳಲ್ಲಿ ಮತ್ತೆ ಕೊರೋನ ಹರಡುತ್ತಿದೆ… ಮಹಾರಾಷ್ಟ್ರ, ಕೇರಳ, ಪಂಜಾಬ್, ಛತ್ತೀಸ್​ಗಢ ಮತ್ತು ಮಧ್ಯಪ್ರದೇಶದಲ್ಲಿ ಕೊರೋನಾ ಮತ್ತೆ ತೀವ್ರಗತಿಯಲ್ಲಿ ಹೆಚ್ಚುತ್ತಿದೆ ಅಂತ ಕೇಂದ್ರ ಸರ್ಕಾರ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಅತಿವೇಗವಾಗಿ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗ್ತಿದ್ದು, ಕಳೆದ 24 ಗಂಟೆಗಳಲ್ಲಿ 6,112 ಮಂದಿಗೆ ಕೊರೋನಾ ತಗುಲಿದೆ.

-masthmagaa.com

Contact Us for Advertisement

Leave a Reply