ದೇಶದಲ್ಲಿ ಒಂದೇ ದಿನ 48,513 ಜನರಿಗೆ ಕೊರೋನಾ.. ಯಾವ ರಾಜ್ಯಗಳಲ್ಲಿ ಅತಿ ಹೆಚ್ಚು ಗೊತ್ತಾ..?

masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,513 ಜನರಿಗೆ ಹೊಸದಾಗಿ ಸೋಂಕು ತಗುಲಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಬರೋಬ್ಬರಿ 15 ಲಕ್ಷದ ಗಡಿ ದಾಟಿದ್ದು 15,31,669 ಆಗಿದೆ.

ಭಾರತದಲ್ಲಿ ಒಂದು ಪ್ರಕರಣದಿಂದ 5 ಲಕ್ಷ ಪ್ರಕರಣ ದೃಢಪಡಲು 148 ದಿನಗಳು ಬೇಕಾಗಿತ್ತು. 5 ಲಕ್ಷದಿಂದ 10 ಲಕ್ಷ ಪ್ರಕರಣ ದೃಢಪಡಲು 20 ದಿನ ತೆಗೆದುಕೊಂಡಿತ್ತು. ಇದೀಗ 10 ಲಕ್ಷದಿಂದ 15 ಲಕ್ಷಕ್ಕೆ ಕೇವಲ 12 ದಿನಗಳನ್ನ ತೆಗೆದುಕೊಂಡಿದೆ. ಅಷ್ಟು ವೇಗದಲ್ಲಿ ಕೊರೋನಾ ಸೋಂಕು ವ್ಯಾಪಿಸುತ್ತಿದೆ.

ಕಳೆದ 24 ಗಂಟೆಗಳಲ್ಲಿ 768 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 34,193ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 35,285 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು 9,88,029 ಸೋಂಕಿತರು ಗುಣಮುಖರಾದಂತಾಗಿದ್ದು 5,09,447 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಶದಲ್ಲಿ ಗುಣಮುಖ ಪ್ರಮಾಣ 64.50 ಪರ್ಸೆಂಟ್ ಇದೆ. ಸಾವಿನ ಪ್ರಮಾಣ 2.23 ಪರ್ಸೆಂಟ್ ಇದೆ. ಜುಲೈ 28ರಂದು ದೇಶದಲ್ಲಿ 4.08 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದುವರೆಗೆ ಒಟ್ಟು 1.77 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷೆ ಮಾಡಲಾಗಿದೆ ಅಂತ ಐಸಿಎಂಆರ್ ಹೇಳಿದೆ.

ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ಸೋಂಕು ದೃಢಪಟ್ಟ ರಾಜ್ಯಗಳ ಪಟ್ಟಿಯಲ್ಲಿ ಆಂಧ್ರಪ್ರದೇಶ ಮೊದಲ ಸ್ಥಾನದಲ್ಲಿದೆ. ಆಂಧ್ರದಲ್ಲಿ 7,948 ಜನರಿಗೆ ಹೊಸದಾಗಿ ಸೋಂಕು ತಗುಲಿದೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ(7,717), ತಮಿಳುನಾಡು (6,972), ಕರ್ನಾಟಕ (5,536), ಉತ್ತರಪ್ರದೇಶ (3,490), ಬಿಹಾರ (2,480), ಪಶ್ಚಿಮ ಬಂಗಾಳ (2,134) ಇದೆ.

ರಾಜ್ಯವಾರು ಸಕ್ರಿಯ ಪ್ರಕರಣಗಳು (ಟಾಪ್-10):

1. ಮಹಾರಾಷ್ಟ್ರ: 1.44 ಲಕ್ಷ ಪ್ರಕರಣ (14,165 ಸಾವು)

2. ಕರ್ನಾಟಕ: 64,000+ ಪ್ರಕರಣ (2,055 ಸಾವು)

3. ತಮಿಳುನಾಡು: 57,000+ ಪ್ರಕರಣ (3,659 ಸಾವು)

4. ಆಂಧ್ರಪ್ರದೇಶ: 56,000+ ಪ್ರಕರಣ (1,148 ಸಾವು)

5. ಉತ್ತರಪ್ರದೇಶ: 27,000+ ಪ್ರಕರಣ (1,497 ಸಾವು)

6. ಪಶ್ಚಿಮ ಬಂಗಾಳ: 19,000+ ಪ್ರಕರಣ (1,449 ಸಾವು)

7. ಬಿಹಾರ: 14,000+ ಪ್ರಕರಣ (269 ಸಾವು)

8. ತೆಲಂಗಾಣ: 13,000+ ಪ್ರಕರಣ (480 ಸಾವು)

9. ಗುಜರಾತ್: 13,000+ ಪ್ರಕರಣ (2,372 ಸಾವು)

10. ದೆಹಲಿ: 10,000+ ಪ್ರಕರಣ (3,881 ಸಾವು)

-masthmagaa.com

Contact Us for Advertisement

Leave a Reply