ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಯಲ್ಲಿ ಇಸ್ರೇಲ್​​ಗೆ ಭಾರತ ಜೈ!?

masthmagaa.com:

ಇತ್ತೀಚೆಗೆ ನಡೆದ ಇಸ್ರೇಲ್- ಪ್ಯಾಲೆಸ್ತೇನ್ ಸಂಘರ್ಷದ ವೇಳೆ ಈಸ್ಟ್​ ಜೆರುಸಲೆಂ ಸೇರಿದಂತೆ ಆಕ್ರಮಿತ ಪ್ಯಾಲೆಸ್ತೇನ್​ನಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗಿದೆಯಾ ಅನ್ನೋ ಬಗ್ಗೆ ತನಿಖೆ ನಡೆಸಲು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ನಿರ್ಧರಿಸಿದೆ. ಅದಕ್ಕಾಗಿ ನಿರ್ಣಯ ಮಂಡಿಸಿದ್ದು, ಅದರ ಮತದಾನದ ವೇಳೆ ಭಾರತ ಗೈರಾಗಿದೆ. ಭಾರತ ಮಾತ್ರವಲ್ಲ.. ಫ್ರಾನ್ಸ್, ನೇಪಾಳ, ಇಟಲಿ, ಜಪಾನ್ ಕೂಡ ಈ ವೋಟಿಂಗ್​​ನಲ್ಲಿ ಗೈರಾಗಿವೆ. ಆದ್ರೂ ಕೂಡ ಈ ನಿರ್ಣಯಕ್ಕೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 47 ಸದಸ್ಯ ರಾಷ್ಟ್ರಗಳ ಪೈಕಿ ಪಾಕಿಸ್ತಾನ, ಬಾಂಗ್ಲಾದೇಶ, ಚೀನಾ ಸೇರಿದಂತೆ 24 ರಾಷ್ಟ್ರಗಳು ನಿರ್ಣಯಕ್ಕೆ ಬೆಂಬಲಿಸಿ ಮತ ಹಾಕಿವೆ. 9 ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದ್ದು, ಭಾರತ ಸೇರಿದಂತೆ 14 ರಾಷ್ಟ್ರಗಳು ಗೈರಾಗಿದ್ವು. ಅಂದಹಾಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಈ ತನಿಖೆಗೆ ಇಸ್ರೇಲ್ ವಿರೋಧ ವ್ಯಕ್ತಪಡಿಸಿದ್ದು, ತಾನು ತನಿಖೆಗೆ ಸಹಕರಿಸೋದಿಲ್ಲ ಅಂತ ಹೇಳಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾಹ್ಯಹು ಅಂತೂ ಇದು ವಿಶ್ವಸಂಸ್ಥೆ ಮಾನವಹಕ್ಕು ಮಂಡಳಿಯ ನಾಚಿಕೆಗೇಡಿನ ನಿಧಾರವಾಗಿದ್ದು, ಇಸ್ರೇಲ್​​ ವಿರೋಧಿ ನಿಲುವಿನ ಮತ್ತೊಂದು ಉದಾಹರಣೆ ಅಂತ ಹೇಳಿದ್ದಾರೆ. ಅತ್ತ ಪ್ಯಾಲೆಸ್ತೇನ್ ತನಿಖೆಯನ್ನು ಸ್ವಾಗತಿಸಿದೆ.

-masthmagaa.com

Contact Us for Advertisement

Leave a Reply