ರಷ್ಯಾ ಕರೆದ ಸಭೆಯಲ್ಲಿ ಮುಖಾಮುಖಿಯಾಗಲಿದೆ ಭಾರತ-ತಾಲಿಬಾನ್!

masthmagaa.com:

ರಷ್ಯಾದ ಮಾಸ್ಕೋದಲ್ಲಿ ನಡೆಯಲಿರೋ ಅಫ್ಘಾನಿಸ್ತಾನದ ಕುರಿತ ಮಾತುಕತೆಯಲ್ಲಿ ಭಾಗಿಯಾಗಲು ಭಾರತ ನಿರ್ಧರಿಸಿದೆ. ರಷ್ಯಾ ನೀಡಿದ್ದ ಆಮಂತ್ರಣಕ್ಕೆ ಸಮ್ಮತಿ ನೀಡಿದೆ. ಅಕ್ಟೋಬರ್ 20ರಂದು ಈ ಸಭೆ ನಡೆಯಲಿದೆ. ತಾಲಿಬಾನಿಗಳಿಗೂ ಈ ಸಭೆಯಲ್ಲಿ ಭಾಗಿಯಾಗಲು ಆಹ್ವಾನ ನೀಡಲಾಗಿದೆ. ಅಂದ್ರೆ ಈ ಸಭೆಯಲ್ಲಿ ಭಾರತ ಮತ್ತು ತಾಲಿಬಾನಿಗಳು ಮುಖಾಮುಖಿಯಾಗಲಿದ್ದಾರೆ. ಈ ಸಭೆಯಲ್ಲಿ ಭಾಗಿಯಾಗೋ ಬಗ್ಗೆ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗ್ಚಿ ಮಾಹಿತಿ ನೀಡಿದ್ದಾರೆ. ಆಗಸ್ಟ್​​ 31ರಂದು ಕತಾರ್ ರಾಜಧಾನಿ ದೋಹಾದಲ್ಲಿ ಭಾರತ ತಾಲಿಬಾನಿಗಳ ಜೊತೆಗೆ ಅನೌಪಚಾರಿಕವಾಗಿ ಮಾತುಕತೆ ನಡೆಸಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ ತಾಲಿಬಾನಿಗಳ ಜೊತೆ ಮುಖಾಮುಖಿ ಭೇಟಿಯಾಗ್ತಿದೆ. ಚೀನಾ, ಪಾಕಿಸ್ತಾನ, ಇರಾನ್ ಕೂಡ ಈ ಸಭೆಯಲ್ಲಿ ಭಾಗಿಯಾಗ್ತಿವೆ.

-masthmagaa.com

Contact Us for Advertisement

Leave a Reply