ಭಾರತದ ರಫ್ತುದರ ಇಳಿಕೆ! ಕಾರಣವೇನು?

masthmagaa.com:

ಭಾರತದ ರಫ್ತಿನಲ್ಲಿ ಕುಸಿತ ಕಂಡಿದೆ. ಅಕ್ಟೋಬರ್‌ ತಿಂಗಳಲ್ಲಿ ಕೆಲ ವಲಯಗಳಲ್ಲಿನ ಸರಕುಗಳ ರಫ್ತಿನಲ್ಲಿ ಆದ ಕುಸಿತದಿಂದ ದೇಶದ ಒಟ್ಟು ರಫ್ತಿನಲ್ಲಿ ಇಳಿಕೆ ಕಂಡಿದೆ ಅಂತ ವರದಿಯಾಗಿದೆ. ಅಕ್ಟೋಬರ್‌ನಲ್ಲಿ ದೇಶದ ರಫ್ತು ಪ್ರಮಾಣ 16.65% ಕುಸಿತ ಕಂಡು 29.78 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 2.4 ಲಕ್ಷ ಕೋಟಿ ರೂಪಾಯಿ ಇಳಿಕೆಯಾಗಿದೆ ಅಂತ ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶದಿಂದ ತಿಳಿದು ಬಂದಿದೆ. ಅದೇ ಅವಧಿಯಲ್ಲಿ ಆಮದು 56.69 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 4.6 ಲಕ್ಷ ಕೋಟಿ ರೂಪಾಯಿ ಆಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ಅಂದ್ರೆ 2021ರ ಅಕ್ಟೋಬರ್‌ನಲ್ಲಿ ಆಮದು 53.64 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 4.3 ಲಕ್ಷ ಕೋಟಿ ರೂಪಾಯಿ ಇತ್ತು ಅಂತ ಅಂಕಿ ಅಂಶದಿಂದ ತಿಳಿದುಬಂದಿದೆ.

-masthmagaa.com

Contact Us for Advertisement

Leave a Reply