ರಷ್ಯಾ-ಯುಕ್ರೇನ್ ಯುದ್ಧ: ಭಾರತ ಚಂಚಲ ಎಂದ ಬೈಡೆನ್

masthmagaa.com:

ರಷ್ಯಾ ಆಕ್ರಮಣದ ವಿರುದ್ಧ ಪ್ರತಿರೋಧ ತೋರೋದ್ರಲ್ಲಿ ಭಾರತ ಚಂಚಲವಾಗಿದೆ ಅಂತ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ. ಅಮೇರಿಕದ ಉದ್ಯಮಿಗಳ ಸಭೆಯೊಂದನ್ನ ಉದ್ದೇಶಿಸಿ ಮಾತಾಡಿರೋ ಅವ್ರು, ನ್ಯಾಟೋ ಮತ್ತು ಫೆಸಿಫಿಕ್‌ನಲ್ಲಿ ರಷ್ಯಾ ವಿರುದ್ಧ ಒಗ್ಗಟ್ಟಾದ ಪ್ರತಿರೋಧ ಇದೆ. ಇನ್ನೇನು ಕ್ವಾಡ್‌ ಕೂಟದಲ್ಲಿ ಚಂಚಲವಾಗಿರೋ ಭಾರತ ಒಂದನ್ನ ಹೊರತುಪಡಿಸಿದ್ರೆ, ಜಪಾನ್‌ ಮತ್ತು ಆಸ್ಟ್ರೇಲಿಯಾ ಕೂಡ ರಷ್ಯಾ ವಿರುದ್ಧ ಪ್ರಬಲವಾದ ನಿಲುವನ್ನ ತಗೊಂಡಿವೆ ಅಂತ ಹೇಳಿದ್ದಾರೆ. ಜೊತೆಗೆ ಪುಟಿನ್‌ ನ್ಯಾಟೋನ ಇಬ್ಬಾಗ ಮಾಡ್ತೀನಿ ಅಂತ ಅಂದ್ಕೊಂಡಿದ್ರು. ಆದ್ರೆ ನ್ಯಾಟೊ ಹಿಂದೆಂದಿಗಿಂತಲೂ ಬಲವಾಗಿ, ಒಗ್ಗಟ್ಟಾಗಿ ಇದೆ ಅಂತ ಹೇಳಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಬೈಡನ್‌, ಪುಟಿನ್‌ಗೆ ಏನು ಮಾಡ್ಬೇಕು ಅಂತ ತಿಳೀತಿಲ್ಲ ರಷ್ಯಾ ಕಂಗಾಲಾಗಿದೆ. ಅದ್ಕೆ ಅವ್ರು ಈಗ ಈ ಹೊಸ ಬಯಾಲಜಿಕಲ್‌ ವೆಪನ್‌ನ ನಾಟ್ಕ ಆಡ್ತಿರೋದು, ಅಮೇರಿಕ ಹತ್ರ ಜೈವಿಕ ಆಯುಧಗಳಿವೆ, ಯುರೋಪ್‌ ಹತ್ರ ರಾಸಾಯನಿಕ ಆಯುಧಗಳಿವೆ ಅಂತ ಹೇಳ್ತಿರೋದು. ಆದ್ರೆ ಅದೆಲ್ಲ ಸುಳ್ಳು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply