ಭಾರತಕ್ಕೆ ಜಪಾನ್​ ಬಲ..! ಚೀನಾಗೆ ಉರಿಯೋ ಉರಿ…

masthmagaa.com:

ದೆಹಲಿ: ಭಾರತ-ಚೀನಾ ಗಡಿ ಸಂಘರ್ಷದ ಹೊತ್ತಲ್ಲೇ ಭಾರತಕ್ಕೊಂದು ಸಿಹಿ ಸುದ್ದಿ ಸಿಕ್ಕಿದೆ. ಜಪಾನ್​ನ ಆರ್ಥಿಕ, ವ್ಯಾಪಾರ ಮತ್ತು ಉದ್ಯಮ ಸಚಿವಾಲಯ ಚೀನಾದಿಂದ ಹೊರಬರುತ್ತಿರುವ ಜಪಾನ್​ನ ಕಂಪನಿಗಳು ಭಾರತ ಮತ್ತು ಬಾಂಗ್ಲಾದೇಶಕ್ಕೂ ಹೋಗಬಹುದು ಎಂದು ಘೋಷಿಸಿದೆ. ಅಂದ್ರೆ ಈ ಹಿಂದೆ ಚೀನಾದಿಂದ ಹೊರಬರುತ್ತಿರುವ ಕಂಪನಿಗಳು ಏಸಿಯಾನ್​​​​​ (ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ)ದ ಪೈಕಿ ಯಾವುದೇ ರಾಷ್ಟ್ರಗಳಿಗೆ ಹೋಗಬಯಸಿದ್ರೆ ಜಪಾನ್ ಸರ್ಕಾರದ ಕಡೆಯಿಂದ ಅಂತಹ ಕಂಪನಿಗಳಿಗೆ ಸಬ್ಸಿಡಿ ನೀಡಲಾಗುತ್ತೆ ಅಂತ ಘೋಷಿಸಿತ್ತು. ಇದೀಗ ಏಸಿಯಾನ್ ದೇಶಗಳ ಜೊತೆಗೆ ಭಾರತ ಮತ್ತು ಬಾಂಗ್ಲಾದೇಶಕ್ಕೂ ಕಂಪನಿಗಳು ಹೋಗಬಹುದು.. ಅಂತಹ ಕಂಪನಿಗಳಿಗೂ ಸಬ್ಸಿಡಿ ನೀಡಲಾಗುತ್ತೆ ಅಂತ ಘೋಷಿಸಿದೆ.

ಇದೇ ಸೆಪ್ಟೆಂಬರ್ 10ರಂದು ಇಂಡಿಯಾ-ಜಪಾನ್ ಶೃಂಗಸಭೆ ನಡೆಯಲಿದ್ದು, ಪ್ರಧಾನಿ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಬೋ ಅಬೆ ಭಾಗಿಯಾಗಲಿದ್ದಾರೆ. ಶಿಂಜೋ ಅನಾರೋಗ್ಯದ ಕಾರಣದಿಂದ ರಾಜೀನಾಮೆ ನೀಡಿದ್ದು, ಇದು ಅವರಿಗೆ ಕೊನೆಯ ಶೃಂಗಸಭೆಯಾಗಲಿದೆ. ಇದೇ ವೇಳೆ ಉಭಯರಾಷ್ಟ್ರಗಳು ಮಿಲಿಟರಿ ಸಹಕಾರಕ್ಕೆ ಸಂಬಂಧಿಸಿದಂತೆಯೂ ಒಪ್ಪಂದಗಳಿಗೆ ಸಹಿ ಹಾಕಲಿವೆ.

-masthmagaa.com

Contact Us for Advertisement

Leave a Reply