ಪೊಲೀಸರು ಲಾಠಿ ಪ್ರಹಾರ ಮಾಡಂಗಿಲ್ಲ: ಕಮಲ್ ಪಂಥ್ ಆದೇಶ

masthmagaa.com:

ಇವತ್ತಿಂದ ಮತ್ತೊಂದು ಹಂತದ ಲಾಕ್​ಡೌನ್ ಶುರುವಾಗಿದೆ. ಮೊದಲ ದಿನವಾದ ಇಂದು ಲಾಕ್​ಡೌನ್ ಯಶಸ್ವಿಯಾಗಿದೆ. ಆದ್ರೆ ಅಲ್ಲಲ್ಲಿ ರೂಲ್ಸ್ ಬ್ರೇಕ್ ಮಾಡಿದ ಪುಂಡರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ಧಾರೆ. ಆದ್ರೆ ಇನ್ನು ಕೆಲವು ಕಡೆ ಪೊಲೀಸರು ಕಾರಣವನ್ನೇ ಕೇಳದೇ ಲಾಠಿಯಲ್ಲೇ ಮಾತಾಡಿದ್ದಾರೆ ಅನ್ನೋ ಆರೋಪ ಕೂಡ ಕೇಳಿ ಬಂದಿದೆ. ಸರ್ಕಾರ ಅಗತ್ಯ ಇರುವವರು ದಾಖಲೆ ತೋರಿಸಿ ಓಡಾಡ್ಬೋದು ಅಂತ ಹೇಳಿದೆ. ಆದ್ರೆ ದಾಖಲೆ ತೋರಿಸೋಕು ಮುನ್ನವೇ ಹೊಡೆದ್ರೆ ಏನ್ ಮಾಡೋದು ಅಂತ ಕೆಲವರು ಆರೋಪಿಸಿದ್ದಾರೆ. ಎಲ್ಲಾ ಕಡೆ ಅಲ್ಲ.. ಕೆಲವು ಕಡೆ ಮಾತ್ರ.. ಅದ್ರ ಬೆನ್ನಲ್ಲೇ ಬೆಂಗಳೂರಿನಲ್ಲಿ ಯಾರ ಮೇಲೂ ಲಾಠಿ ಚಾರ್ಜ್ ಮಾಡುವಂತಿಲ್ಲ ಅಂತ ಪೊಲೀಸ್ ಆಯುಕ್ತ ಕಮಲ್ ಪಂಥ್ ಆದೇಶಿಸಿದ್ಧಾರೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ.. ಬಲಪ್ರಯೋಗ ಬೇಡ ಎಂದಿದ್ದಾರೆ. ಇನ್ನು ಇತ್ತೀಚೆಗೆ ಆಕ್ಸಿಜನ್ ದುರಂತ ಸಂಭವಿಸಿದ್ದ ಚಾಮರಾಜನಗರ ಜಿಲ್ಲೆ ವಾರದ 4 ದಿನ ಕಂಪ್ಲೀಟ್ ಬಂದ್ ಆಗಿರಲಿದೆ ಅಂತ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply