ಡಿಸೆಂಬರ್​ 31ಕ್ಕೆ ಕರ್ನಾಟಕ ಬಂದ್​​ | ಫುಲ್ ಬಂದ್ ಆಗುತ್ತಾ?

masthmagaa.com:

ಎಂಇಎಸ್ ಅಥವಾ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನ ಬ್ಯಾನ್​ ಮಾಡ್ಬೇಕು ಅಂತ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಡಿಸೆಂಬರ್​ 31ಕ್ಕೆ ಕರ್ನಾಟಕ ಬಂದ್​​ಗೆ ಕರೆ ಕೊಟ್ಟಿವೆ. ವಾಟಾಳ್ ನಾಗರಾಜ್‌, ಸಾ.ರಾ.ಗೋವಿಂದು ಮತ್ತಿತರರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸುದ್ದಿಗೋಷ್ಠಿ ವೇಳೆ ಮಾತನಾಡಿದ ವಾಟಾಳ್​ ನಾಗರಾಜ್​, ಡಿಸೆಂಬರ್ 29ರೊಳಗೆ ಎಂಇಎಸ್​​ ಅನ್ನ ನಿಷೇಧಿಸಿದ್ರೆ ಬಂದ್ ನಿರ್ಧಾರವನ್ನ ವಾಪಸ್​ ತಗೋತೀವಿ ಅಂತ ಹೇಳಿದ್ದಾರೆ. ಇನ್ನು ಕರ್ನಾಟಕ ಬಂದ್​ ಕರೆಗೆ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ರೆ, ಇನ್ನೂ ಕೆಲ ಸಂಘ ಸಂಸ್ಥೆಗಳು ನೈತಿಕ ಬೆಂಬಲ ನೀಡಿವೆ. ಬೀದಿಬದಿ ವ್ಯಾಪಾರಿಗಳ ಸಂಘಟನೆ ಬೆಂಬಲ ಕೊಟ್ಟಿದೆ. ಡಿಸೆಂಬರ್​ 31ರ ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಓಲಾ, ಉಬರ್ ಸೇವೆ ಇರಲ್ಲ. ಏರ್​ಪೋರ್ಟ್​ ಟ್ಯಾಕ್ಸಿ ಸೇವೆ ಇರಲ್ಲ. ಆಟೋ ರಸ್ತೆಗಳಿಯೋದು ಕೂಡ ಅನುಮಾನ ಎನ್ನಲಾಗ್ತಿದೆ. ಇನ್ನು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣ ಬಂದ್​ಗೆ ಬೆಂಬಲ ಕೊಡಲ್ಲ ಅಂತ ಹೇಳಿದೆ. ಹೋಟೆಲ್, ಬಾರ್​ ಅಂಡ್​ ರೆಸ್ಟೋರೆಂಟ್​​​ ಸಂಘದವರು ನೈತಿಕ ಬೆಂಬಲ ಕೊಡೋದಾಗಿ ಹೇಳಿದ್ದಾರೆ. ಹೀಗಾಗಿ ಅವು ಬಂದ್​ ಆಗಲ್ಲ. ಖಾಸಗಿ ಮತ್ತು ಅನುದಾನರಹಿತ ಶಾಲೆಗಳ ಒಕ್ಕೂಟ ಕೂಡ ನೈತಿಕ ಬೆಂಬಲ ನೀಡೋದಾಗಿ ಹೇಳಿದೆ. ಇನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್​ ಮಾತನಾಡಿ, ಚಿತ್ರರಂಗ ಈಗಾಗಲೇ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ. ಹೀಗಾಗಿ ಬಂದ್​ಗೆ ಚಿತ್ರರಂಗ ಬೆಂಬಲ ಕೊಡೋ ಬಗ್ಗೆ ಸಭೆ ನಡೆಸಿ ತೀರ್ಮಾನ ತಗೋತೀವಿ ಎಂದಿದ್ದಾರೆ. ಸಾರಿಗೆ ನೌಕರರ ಒಕ್ಕೂಟ ಕೂಡ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ.

ಕರ್ನಾಟಕ ಬಂದ್​​ ಬಗ್ಗೆ ಸರ್ಕಾರದಲ್ಲೇ ಭಿನ್ನಾಭಿಪ್ರಾಯವಿದ್ದಂತೆ ಕಾಣ್ತಿದೆ. ಕೆಲ ಸಚಿವರು ಬಂದ್​ ಸರಿಯಲ್ಲ ಅಂದ್ರೆ, ಇನ್ನೂ ಕೆಲವರು ಬಂದ್​ಗೆ ಸಪೋರ್ಟ್​ ಮಾಡ್ಬೇಕು ಎಂದಿದ್ದಾರೆ. ಕಂದಾಯ ಸಚಿವ ಆರ್​. ಅಶೋಕ್​ ಮಾತನಾಡಿ, ಬಂದ್​ಗೆ ಕರೆ ಕೊಡೋದ್ರಿಂದ ಜನರಿಗೆ ತೊಂದ್ರೆ ಆಗುತ್ತೆ, ಬಂದ್​ನಿಂದ ಏನೂ ಸಾಧಿಸೋಕ್ಕಾಗಲ್ಲ. ಎಂಇಎಸ್​ ಪುಂಡಾಟಿಕೆಯನ್ನ ಮಟ್ಟಹಾಕೋಕೆ ಕ್ರಮ ತಗೋತಿವಿ. ಕೊರೋನಾದಿಂದ ಜನ ಈಗಾಗಲೇ ಸಮಸ್ಯೆ ಅನುಭವಿಸಿದ್ದಾರೆ. ಮತ್ತೆ ಬಂದ್​ ಬೇಡ ಅಂತ ಹೇಳಿದ್ದಾರೆ. ಇದಕ್ಕೆ ವಿರುದ್ಧ ಎಂಬಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​. ಈಶ್ವರಪ್ಪ ಮಾತನಾಡಿ, ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಸೇರಿ ಎಲ್ಲಾ ರಾಜಕೀಯ ಪಕ್ಷಗಳು ಪಕ್ಷಬೇಧ ಮರೆತು ಬಂದ್​ಗೆ ಸಪೋರ್ಟ್ ಮಾಡ್ಬೇಕು ಎಂದಿದ್ದಾರೆ. ಆದ್ರೆ ಬಂದ್​ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.

-masthmagaa.com

Contact Us for Advertisement

Leave a Reply