ರಾಜ್ಯದಲ್ಲಿ ಲಾಕ್​ಡೌನ್ ಯಶಸ್ವಿಯಾಗಿದೆ: ಯಡಿಯೂರಪ್ಪ

masthmagaa.com:

ರಾಜ್ಯದ ಕೊರೊನಾ ಪರಿಸ್ಥಿತಿ ಕುರಿತು ಸಿಎಂ ಬಿ.ಎಸ್.ಯಡಿಯೂರಪ್ಪ ಇವತ್ತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ಕೊಟ್ರು. ಈ ವೇಳೆ ರಾಜ್ಯದಲ್ಲಿ ಏಪ್ರಿಲ್ 24ರಿಂದ ಕೈಗೊಂಡ ಕಠಿಣ ಕ್ರಮಗಳಿಂದ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಮೇ 5ರಂದು ರಾಜ್ಯದಲ್ಲಿ ಗರಿಷ್ಠ ಅಂದ್ರೆ 50,112 ಕೊರೋನಾ ಪ್ರಕರಣಗಳು ದಾಖಲಾಗಿದ್ವು. ಆದ್ರೆ ನಿನ್ನೆ ಆ ಸಂಖ್ಯೆ 39,900ಕ್ಕೆ ಇಳಿಕೆಯಾಗಿದೆ. ಅದೇ ರೀತಿ ಕೊರೋನಾ ಪ್ರಕರಣಗಳು ಹೆಚ್ಚಿದ್ದ ಬೆಂಗಳೂರು ಮತ್ತು ಕಲಬುರಗಿಯಲ್ಲೂ ಕೊರೋನಾ ಪ್ರಕರಣಗಳು ದಿನೇ ದಿನೇ ಕಡಿಮೆಯಾಗ್ತಿವೆ ಅಂತ ಹೇಳಿದ್ರು. ಇನ್ನು ರಾಜ್ಯದಲ್ಲಿ ಸದ್ಯಕ್ಕೆ 2ನೇ ಡೋಸ್​ ಲಸಿಕೆಗೆ ಕಾಯುತ್ತಿರುವವರಿಗೆ ಆದ್ಯತೆ ನೀಡಲಾಗುತ್ತೆ. 18 ರಿಂದ 44 ವರ್ಷದ ಏಜ್​​ಗ್ರೂಪ್​​​​ಗೆ ಲಸಿಕೆ ಹಾಕೋದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಕೋವಿಶೀಲ್ಡ್​ನ 2 ಕೋಟಿ ಮತ್ತು ಕೋವ್ಯಾಕ್ಸಿನ್​ನ 1 ಕೋಟಿ ಡೋಸ್ ಲಸಿಕೆಗೆ ಆರ್ಡರ್ ನೀಡಲಾಗಿದ್ದು, ಕೇಂದ್ರದಿಂದ ಈವರೆಗೆ 1.10 ಕೋಟಿ ಡೋಸ್ ಲಸಿಕೆ ಫ್ರೀಯಾಗೆ ಕೊಟ್ಟಿದೆ ಅಂದ್ರು. ಇನ್ನು ಅಕ್ಟೋಬರ್​​, ನವೆಂಬರ್​ನಲ್ಲಿ 3ನೇ ಅಲೆ ಏಳೋ ಸಾಧ್ಯತೆ ಇರೋದ್ರಿಂದ ಡಾ.ದೇವಿಶೆಟ್ಟಿ ನೇತೃತ್ವದಲ್ಲಿ ಟಾಸ್ಕ್​ ಫೋರ್ಸ್​ ರಚಿಸಲಾಗುತ್ತೆ ಅಂತ ಕೂಡ ಮಾಹಿತಿ ನೀಡಿದ್ರು.

-masthmagaa.com

Contact Us for Advertisement

Leave a Reply