masthmagaa.com:

ರಾಜ್ಯದಲ್ಲಿ ಇವತ್ತು ದಾಖಲೆಯ 4,169 ಜನರಿಗೆ ಸೋಂಕು ತಾಗಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 50 ಸಾವಿರದ ಗಡಿ ದಾಟಿದ್ದು 51,422 ಆಗಿದೆ. ಇವತ್ತು ಬರೋಬ್ಬರಿ 104 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಮೃತಪಟ್ಟ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದ್ದು 1,032 ಆಗಿದೆ.

ರಾಜಧಾನಿ ಬೆಂಗಳೂರಲ್ಲಿ ಚೀನಾ ಸೋಂಕು ಸ್ಫೋಟವಾಗಿದ್ದು ಒಂದೇ ದಿನ 2,344 ಜನರಿಗೆ ಸೋಂಕು ತಗುಲಿದೆ. ಬೆಂಗಳೂರು ಒಂದರಲ್ಲೇ 70 ಸೋಂಕಿತರು ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಇವತ್ತು 1,263 ರೋಗಿಗಳು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 19,729 ಆಗಿದೆ. 30,655 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 539 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣಗಳು:

ಬೆಂಗಳೂರು – 2,344

ದಕ್ಷಿಣ ಕನ್ನಡ – 238

ಧಾರವಾಡ – 176

ವಿಜಯಪುರ – 144

ಮೈಸೂರು – 130

ಕಲಬುರಗಿ – 123

ಉಡುಪಿ – 113

ರಾಯಚೂರು – 101

ಬೆಳಗಾವಿ – 92

ಉತ್ತರ ಕನ್ನಡ – 79

ಚಿಕ್ಕಬಳ್ಳಾಪುರ – 77

ಬೀದರ್ – 53

ಶಿವಮೊಗ್ಗ – 46

ಬಳ್ಳಾರಿ – 44

ಗದಗ – 44

ಇದನ್ನೂ ಓದಿ: ನಾಳೆಯಿಂದಲೇ ಭಾಗಶಃ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಆರಂಭ

ಕೋಲಾರ – 43

ಬಾಗಲಕೋಟೆ – 39

ಯಾದಗಿರಿ – 34

ಕೊಪ್ಪಳ – 32

ಹಾಸನ – 31

ಬೆಂಗಳೂರು ಗ್ರಾಮಾಂತರ – 31

ಚಿಕ್ಕಮಗಳೂರು – 30

ದಾವಣಗೆರೆ – 25

ಚಿತ್ರದುರ್ಗ – 21

ಹಾವೇರಿ – 18

ಕೊಡಗು – 18

ಚಾಮರಾಜನಗರ – 16

ತುಮಕೂರು – 12

ಮಂಡ್ಯ – 11

ರಾಮನಗರ – 4

 

ಇವತ್ತು ಮೃತಪಟ್ಟವರು:

ಬೆಂಗಳೂರು – 70

ದಕ್ಷಿಣ ಕನ್ನಡ – 7

ಕೋಲಾರ – 6

ಬಾಗಲಕೋಟೆ – 5

ಬಳ್ಳಾರಿ – 4

ಮೈಸೂರು – 3

ಬೆಳಗಾವಿ – 3

ಬೀದರ್ – 2

ಹಾಸನ – 2

ಕಲಬುರಗಿ – 1

ಮಂಡ್ಯ – 1

-masthmagaa.com

Contact Us for Advertisement

Leave a Reply