ಅಂತರ್ಜಾತಿ ವಿವಾಹಿತರಿಗೆ ಕೇರಳ ಸರ್ಕಾರದಿಂದ ಉಚಿತ ಮನೆ..!

masthmagaa.com:

ಅನ್ಯ ಜಾತಿಯ ಹುಡುಗ-ಹುಡುಗಿ ಪರಸ್ಪರ ಪ್ರೀತಿಸಿ ಪೋಷಕರ ವಿರೋಧದ ನಡುವೆ ಮದುವೆಯಾದ್ರೆ ಅಂತಹ ಜೋಡಿಗೆ ಬೆದರಿಕೆ ಹಾಕೋದು, ಹಲ್ಲೆ ಮಾಡೋದು, ಬಹಿಷ್ಕಾರ ಹಾಕೋದು ಮುಂತಾದ ಘಟನೆಗಳು ದೇಶದಲ್ಲಿ ಈಗಲೂ ನಡೆಯುತ್ತಿದೆ. ಕೆಲವೊಂದು ಕಡೆ ಮರ್ಯಾದಾ ಹತ್ಯೆ ನಡೆದ ಉದಾಹರಣೆಗಳಿವೆ. ಇದನ್ನೆಲ್ಲಾ ಮನಗಂಡಿರುವ ಕೇರಳ ಸರ್ಕಾರ ಅಂತರ್ಜಾತಿ ವಿವಾಹಹಿತರ ನೆರವಿಗೆ ನಿಂತಿದೆ.

ಅಂತರ್ಜಾತಿ ವಿವಾಹವಾದ ಜೋಡಿಗಳಿಗೆ ಮನೆ ನೀಡಲು ‘ಸೇಫ್  ಹೋಮ್’ ​ಯೋಜನೆ  ಜಾರಿಗೆ ತರಲು ಕೇರಳ ಸರ್ಕಾರ ಚಿಂತನೆ ನಡೆಸಿದೆ. ಇಂತಹ ಮನೆಗಳಲ್ಲಿ ಅಂತರ್ಜಾತಿ ವಿವಾಹವಾದ ದಂಪತಿ ಒಂದು ವರ್ಷದವರೆಗೆ ಆಶ್ರಯ ಪಡೆಯಬಹುದಾಗಿದೆ. ಈ ಬಗ್ಗೆ ಮಾತನಾಡಿರೋ ಸಾಮಾಜಿಕ ನ್ಯಾಯ ಸಚಿವೆ ಕೆ.ಕೆ. ಶೈಲಜಾ, ‘ಮದುವೆಯಾದ ನಂತರ ಮನೆಯನ್ನ ಹೊಂದಲು ಸಾಧ್ಯವಾಗದ ಅಂತರ್ಜಾತಿ ವಿವಾಹಹಿತರು ಇಂತಹ ಮನೆಗಳಲ್ಲಿ ವಾಸಿಸಬಹುದು’ ಎಂದಿದ್ದಾರೆ.

ಕೇರಳ ಸರ್ಕಾರ ಈಗಾಗಲೇ, 1 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಸಾಮಾನ್ಯ ವರ್ಗದ ದಂಪತಿಯ ಸ್ವ-ಉದ್ಯೋಗಕ್ಕೆ 30,000 ರೂಪಾಯಿ ಸಹಾಯಧನ ನೀಡುತ್ತಿದೆ. ಜೊತೆಗೆ ಗಂಡ-ಹೆಂಡಿರ ಪೈಕಿ ಯಾರದರೂ ಒಬ್ಬರು ಪರಿಶಿಷ್ಟ ಜಾತಿಗೆ ಸೇರಿದ್ದರೆ ಅಂತಹ ಕುಟುಂಬಕ್ಕೆ 75,000 ರೂಪಾಯಿ ಆರ್ಥಿಕ ನೆರವು ನೀಡುತ್ತಿದೆ.

-masthmagaa.com

Contact Us for Advertisement

Leave a Reply