ಲಾಕ್​ಡೌನ್​ ಸಡಿಲಿಕೆ: ವೈಮಾನಿಕ ಇಂಧನ, LPG ಬೆಲೆ ಏರಿಕೆ

masthmagaa.com:

ಲಾಕ್​ಡೌನ್​​ನಿಂದ ಭಾರತ ಅನ್​ಲಾಕ್​ ಆಗುತ್ತಿರುವಾಗಲೇ ಸಬ್ಸಿಡಿ ರಹಿತ ಗ್ಯಾಸ್​ ಸಿಲಿಂಡರ್ ಗ್ರಾಹಕರಿಗೆ ಬೆಲೆ ಏರಿಕೆಯ ಬರೆ ಬಿದ್ದಿದೆ. ಮೆಟ್ರೋ ನಗರಗಳಾದ ದೆಹಲಿಯಲ್ಲಿ ಸಬ್ಸಿಡಿ ರಹಿತ 14 ಕೆಜಿ ಸಿಲಿಂಡರ್ ಬೆಲೆ 11.50 ರೂಪಾಯಿ ಏರಿಕೆ ಕಂಡು 593 ರೂಪಾಯಿ ಆಗಿದೆ. ಮುಂಬೈನಲ್ಲಿ 11.50 ರೂಪಾಯಿ ಜಾಸ್ತಿಯಾಗಿ 590.50 ರೂಪಾಯಿ ಆಗಿದೆ. ಕೋಲ್ಕತ್ತದಲ್ಲಿ 31.50 ರೂಪಾಯಿ ಏರಿಕೆ ಕಂಡು 616 ರೂಪಾಯಿ ಆಗಿದೆ. ಚೆನ್ನೈನಲ್ಲಿ 37 ರೂಪಾಯಿ ಏರಿಕೆಯಾಗಿ 606.50 ರೂಪಾಯಿ ಆಗಿದೆ.

19 ಕೆಜಿ ಸಿಲಿಂಡರ್​ನ ಬೆಲೆಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1139.50, ಕೋಲ್ಕತ್ತದಲ್ಲಿ 1193.50, ಮುಂಬೈನಲ್ಲಿ 1087.50 ಹಾಗೂ ಚೆನ್ನೈನಲ್ಲಿ 1254 ರೂಪಾಯಿ ಆಗಿದೆ.

ಮತ್ತೊಂದುಕಡೆ ವೈಮಾನಿಕ ಇಂಧನವಾದ ಏವಿಯೇಷನ್ ಟರ್ಬೈನ್ ಫ್ಯೂಯೆಲ್ (ATF) ಬೆಲೆ ಕೂಡ ಏರಿಕೆ ಕಂಡಿದೆ. ದೆಹಲಿಯಲ್ಲಿ ಎಟಿಎಫ್​ ಬೆಲೆ ಪ್ರತಿ ಕಿಲೋ ಲೀಟರ್​ಗೆ 11,031 ರೂಪಾಯಿ ಏರಿಕೆ ಕಂಡು 33,575 ಆಗಿದೆ. ಕೋಲ್ಕತ್ತದಲ್ಲಿ 38,543 ರೂಪಾಯಿ ಮತ್ತು ಮುಂಬೈನಲ್ಲಿ 33,071 ರೂಪಾಯಿ ಆಗಿದೆ. ದೇಶದಲ್ಲಿ ವಿಮಾನಗಳ ಹಾರಾಟ ನಿಧಾನವಾಗಿ ಶುರುವಾಗಿರುವ ನಡುವೆಯೇ ಎಟಿಎಫ್ ಬೆಲೆ ಏರಿಕೆ ಕಂಡಿದೆ.

-masthmagaa.com

Contact Us for Advertisement

Leave a Reply