ಚೀನಾ ಗಡಿಯಲ್ಲಿ ಮರೀನೋ ಕಮಾಂಡೋಸ್ ನಿಯೋಜಿಸಿದ ಭಾರತ..!

masthmagaa.com:

ದೆಹಲಿ: ಚೀನಾ ಜೊತೆಗಿನ ಸಂಘರ್ಷದ ಹೊತ್ತಲ್ಲೇ ಪೂರ್ವ ಲಡಾಕ್​​ನ ಪಂಗಾಂಗ್ ಸರೋವರದ ಬಳಿ ಭಾರತೀಯ ನೌಕಾಪಡೆ ಮರೀನ್ ಕಮಾಂಡೋಸ್​​ಗಳನ್ನು ನಿಯೋಜಿಸಿದೆ. ಈ ಹಿಂದೆ ವಾಯುಸೇನೆಯ ಗರುಡ ಪಡೆ ಮತ್ತು ಪ್ಯಾರಾ ಸ್ಪೆಷಲ್ ಫೋರ್ಸ್​ ಯೋಧರನ್ನು ನಿಯೋಜಿಸಲಾಗಿತ್ತು. ಇದೀಗ ನೌಕಾಪಡೆಯ ವಿಶೇಷ ಪಡೆಯಾದ ಮರೀನ್ ಕಮಾಂಡೋಸ್​ ಅಂದ್ರೆ ಮಾರ್ಕೋಸ್​​ಗಳನ್ನು ನಿಯೋಜಿಸಲಾಗಿದೆ. ಈ ಮೂಲಕ ಗಡಿಯಲ್ಲಿ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ ಏಕೀಕರಣ ಪ್ರದರ್ಶಿಸೋದು ಇದರ ಪ್ರಮುಖ ಉದ್ದೇಶವಾಗಿದೆ. ಪಂಗಾಂಗ್ ನದಿಯಲ್ಲಿ ಆಪರೇಷನ್​​​ಗಾಗಿ ಸದ್ಯದಲ್ಲೇ ಮರೀನೋ ಕಮಾಂಡೋಸ್​​​ಗೆ ನೌಕೆಯ ವ್ಯವಸ್ಥೆ ಕೂಡ ಮಾಡಲಾಗುತ್ತೆ ಅಂತ ಸೇನೆ ತಿಳಿಸಿದೆ.‌ ಮಾರ್ಕೋಸ್ ಅಂದ್ರೆ ಮರೈನ್ ಕಮಾಂಡೋಸ್ ಅಂತ. ಅಮೆರಿಕದ ನೇವಿ ಸೀಲ್ ಪಡೆಯ ರೀತಿಯಲ್ಲೇ ಈ ಪಡೆಯನ್ನ ರಚಿಸಲಾಗಿದೆ.

-masthmagaa.com

Contact Us for Advertisement

Leave a Reply