masthmagaa.com:

ಕೊರೋನಾ ವೈರಸ್​​ಗೆ ಸಂಬಂಧಿಸಿದಂತೆ ಒಂದು ಗುಡ್​ ನ್ಯೂಸ್. ಈ ವೈರಾಣುವಿಗೆ ಅಮೆರಿಕದ ಮೊಡೆರ್ನಾ ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆ ಮೂರನೇ ಹಂತದ ಮಾನವ ಪ್ರಯೋಗದ ವೇಳೆ 94.5% ಪರಿಣಾಮಕಾರಿ ಅನ್ನೋದು ಗೊತ್ತಾಗಿದೆ ಅಂತ ಕಂಪನಿ ಘೋಷಿಸಿದೆ. ಅಂದ್ರೆ ಕೊರೋನಾದಿಂದ ಈ ಲಸಿಕೆ 94.5%ನಷ್ಟು ರಕ್ಷಣೆ ನೀಡುತ್ತೆ ಅಂತ ಅರ್ಥ. ಇತ್ತೀಚೆಗೆ ಅಮೆರಿಕದ ಫೈಝರ್ (Pfizer) ಮತ್ತು ಬಯೋಎನ್​ಟೆಕ್​ (BioNTech) ಕಂಪನಿ ಅಭಿವೃದ್ಧಿಪಡಿಸಿದ ಲಸಿಕೆ 90% ಪರಿಣಾಮಕಾರಿ ಅಂತ ಹೇಳಿತ್ತು. ಅದಾದ ಬಳಿಕ ರಷ್ಯಾದ ‘ಸ್ಪುಟ್ನಿಕ್​-V’ ಲಸಿಕೆ 92% ಪರಿಣಾಮಕಾರಿ ಅಂತ ಹೇಳಿತ್ತು. ಇದೀಗ ಮೊಡೆರ್ನಾ ಕಂಪನಿ ಅದಕ್ಕಿಂತ ಸ್ವಲ್ಪ ಜಾಸ್ತಿ ಅಂದ್ರೆ 94.5% ಪರಿಣಾಮಕಾರಿ ಅಂತ ಘೋಷಿಸಿಕೊಂಡಿದೆ.

ಫೈಝರ್ ಲಸಿಕೆಗಿಂತ ಮೊಡೆರ್ನಾ ಲಸಿಕೆಯ ನಿರ್ವಹಣೆ ಸುಲಭ. ಯಾಕಂದ್ರೆ ಫೈಝರ್ ಲಸಿಕೆಯನ್ನ ಮೈನಸ್ 70ರಿಂದ 80 ಡಿಗ್ರಿ ಸೆಲ್ಸಿಯಸ್​ನಲ್ಲಿ ಇಡಬೇಕು. ಇದು ತುಂಬಾ ಕಷ್ಟದ ಕೆಲಸ. ಬಡ ದೇಶಗಳಿಗೆ ಈ ಲಸಿಕೆಯ ನಿರ್ವಹಣೆ ಕಷ್ಟಸಾಧ್ಯ. ಆದ್ರೆ ಮೊಡೆರ್ನಾ ಲಸಿಕೆಯನ್ನ 2ರಿಂದ 8 ಡಿಗ್ರಿ ಸೆಲ್ಸಿಯಸ್​ ತಾಪಮಾನದಲ್ಲಿ ಸುಮಾರು 30 ದಿನಗಳವರೆಗೆ ಶೇಖರಿಸಿಡಬಹುದು. ದೀರ್ಘಾವಧಿವರೆಗೆ ಇಡಬೇಕು ಅಂದ್ರೆ ಮೈನಸ್​ 20 ಡಿಗ್ರಿ ಸೆಲ್ಸಿಯಸ್​ನಲ್ಲಿ 6 ತಿಂಗಳವರೆಗೆ ಇಡಬಹುದು ಅಂತ ಕಂಪನಿ ಹೇಳಿದೆ.

ಆದ್ರೆ ಮೊಡೆರ್ನಾ ಲಸಿಕೆಯ ಎರಡು ಡೋಸ್​ನ ಕೋರ್ಸ್​ಗೆ 3,700ರಿಂದ 4,500 ರೂಪಾಯಿ ನಿಗದಿಪಡಿಸಲಾಗಿದೆ. ಅಷ್ಟು ದುಬಾರಿ. ಆಸ್ಟ್ರಾಝೆನೆಕಾ ಮತ್ತು ಆಕ್ಸ್​ಫರ್ಡ್​ ಯುನಿವರ್ಸಿಟಿ ಅಭಿವೃದ್ಧಿಪಡಿಸಿರುವ ಲಸಿಕೆಯ ಒಂದು ಡೋಸ್​ಗೆ ಕೇವಲ 300 ರೂಪಾಯಿ. ಫೈಝರ್ ಲಸಿಕೆಯ ಎರಡು ಡೋಸ್​ನ ಕೋರ್ಸ್​ಗೆ 3,000 ರೂಪಾಯಿ ನಿಗದಿ ಮಾಡಿದೆ. ಫೈಝರ್ ಕಂಪನಿಯ 4 ಕೋಟಿ ಡೋಸ್​ಗಳಿಗೆ ಬ್ರಿಟನ್​ ಆರ್ಡರ್​ ಕೊಟ್ಟಿದೆ.

-masthmagaa.com

Contact Us for Advertisement

Leave a Reply