ಬಂದಿದೆ ಡೆಲ್ಟಾದ ರಕ್ಕಸ ಮಗು! ಇಡೀ ವಿಶ್ವದಲ್ಲಿ ಮತ್ತೆ ಕರೋನಾ ಅಲೆ?

masthmagaa.com:

ಡೆಲ್ಟಾಗಿಂತಲೂ ಅಪಾಯಕಾರಿಯಾದ ಹೊಸ ಕೊರೋನ ವೈರಸ್ ವೇರಿಯೆಂಟ್ ಈಗ ಭಾರತದಲ್ಲೂ ಕಾಣಿಸಿಕೊಂಡಿದೆ. ಯುಕೆ ಹಾಗೂ ಯುರೋಪ್ ನಲ್ಲಿ ಹಾವಳಿ ಇಡ್ತಿರೋ ಹೊಸ ರೂಪಾಂತರಿ ಯುಕೆ, ರಷ್ಯಾಗಳಲ್ಲಿ ಇದ್ದಕ್ಕಿದ್ದ ಹಾಗೆ ಹೊಸ ಕೊರೋನ ಅಲೆಗೆ ಕಾರಣ ಆಗಿದೆ. ರಷ್ಯಾ ಮಾಸ್ಕೋದಲ್ಲಿ ಮುಂದಿನ ವಾರದಿಂದ ಮತ್ತೆ ಲಾಕ್ ಡೌನ್ ಶುರುವಾಗ್ತಿದೆ. ಇದು ಡೆಲ್ಟಾ ರೂಪಾಂತರಿಯಿಂದ ಮ್ಯುಟೇಶನ್ ಆಗಿರೋ ಹೊಸ ರೂಪಾಂತರಿ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಇದಕ್ಕೆ AY.4.2 ಅಂತ ಕೋಡ್ ನೇಮ್ ಇಡಲಾಗಿದೆ. ಇದು ಈಗ ಭಾರತದಲ್ಲೂ ಕಾಣಿಸಿಕೊಂಡಿದೆ. ಆದ್ರೆ ತುಂಬಾ ಸಣ್ಣ ಪ್ರಮಾಣದಲ್ಲಿ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಇದು ಅತ್ಯಂತ ವೇಗವಾಗಿ ಹರಡೋ ಶಕ್ತಿ ಹೊಂದಿದ್ದು, ಲಸಿಕೆ ಇದರ ಮೇಲೆ ಪರಿಣಾಮ ಬೀರುತ್ತಾ ಅನ್ನೋ ಬಗ್ಗೆ ಕೂಡ ಅನುಮಾನ ಶುರುವಾಗಿದೆ. ಯಾಕಂದ್ರೆ UKಯಲ್ಲಿ ಲಸಿಕೆ ಅಭಿಯಾನ ತುಂಬಾ ಚೆನ್ನಾಗಿ ನಡೆದಿದೆ. ಆದ್ರೂ ಕೂಡ ಅಲ್ಲಿ ಕೊರೋನದ ಹೊಸ ಅಲೆ ಈಗ ಜೋರಾಗಿದೆ.

-masthmagaa.com

Contact Us for Advertisement

Leave a Reply