ಮುಂಬೈನಲ್ಲಿ 55 ವರ್ಷ ಮೇಲ್ಪಟ್ಟ ಪೊಲೀಸರಿಗೆ ರಜೆ..!

masthmagaa.com:

ಕೊರೋನಾ ವೈರಸ್​ಗೆ ಮುಂಬೈನಲ್ಲಿ ಮೂವರು ಪೊಲೀಸರು ಮೃತಪಟ್ಟ ಹಿನ್ನೆಲೆ ನಗರದಲ್ಲಿ 55 ವರ್ಷ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳು ಕೆಲಸಕ್ಕೆ ಹಾಜರಾಗದಂತೆ ಸೂಚಿಸಲಾಗಿದೆ. ಜೊತೆಗೆ ಕಾಯಿಲೆ ನಿಯಂತ್ರಣಕ್ಕೆ ಬರುವವರೆಗೆ ಮನೆಯಲ್ಲೇ  ಉಳಿಯಿರಿ ಅಂತ ಹೇಳಲಾಗಿದೆ.

ವಯಸ್ಸಾದವರಿಗೆ ಸೋಂಕು ತಗುಲುವ ಸಾದ್ಯತೆ ಹೆಚ್ಚಿರುತ್ತದೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರಿಗೂ ಸೋಂಕು ತಗುಲದಂತೆ ತಡೆಯಲು ಈ ನಿರ್ಧಾರಕ್ಕೆ ಬರಲಾಗಿದೆ. ಸೋಮವಾರವಷ್ಟೇ ಮುಂಬೈನಲ್ಲಿ 56 ವರ್ಷದ ಮುಖ್ಯ ಪೇದೆಯೊಬ್ಬರು ಮೃತಪಟ್ಟಿದ್ದರು.

ಮುಂಬೈ ಒಂದರಲ್ಲೇ 5,500ಕ್ಕೂ ಹೆಚ್ಚು ಜನರಿಗೆ ಕಾಯಿಲೆ ತಗುಲಿದ್ದು, 219 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೊರೋನಾಗೆ ಸಂಬಂಧಪಟ್ಟಂತೆ ದೇಶದಲ್ಲಿ ಅತಿ ಹೆಚ್ಚು ಸೋಂಕಿತರು ಹಾಗೂ ಮೃತಪಟ್ಟಿರೋದು ಮಹಾರಾಷ್ಟ್ರದಲ್ಲಿ.

-masthmagaa.com

Contact Us for Advertisement

Leave a Reply