ಹಾಂಗ್‌ಕಾಂಗ್‌ನಲ್ಲಿ 6ಮಂದಿ ಹೈಸ್ಕೂಲ್‌ ಮಕ್ಕಳ ಬಂಧನ ಯಾಕೆ ಗೊತ್ತಾ?

masthmagaa.com:

ಹಾಂಗ್​ಕಾಂಗ್​​ನಲ್ಲಿ ಉಗ್ರ ಚಟುವಟಿಕೆಗಳಿಗೆ ಸ್ಫೋಟಕಗಳನ್ನು ಬಳಸಿದ ಶಂಕೆ ಮೇರೆಗೆ 9 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಇವರೆಲ್ಲರೂ 15ರಿಂದ 39 ವರ್ಷದವರಾಗಿದ್ದಾರೆ. ಇನ್ನೊಂದು ವಿಚಾರ ಅಂದ್ರೆ ಬಂಧಿತರಲ್ಲಿ 6 ಮಂದಿ ಹೈಸ್ಕೂಲ್​ನಲ್ಲಿ ಓದುತ್ತಿದ್ದ ಮಕ್ಕಳೇ ಆಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಪೊಲೀಸರು, ಇವರೆಲ್ಲಾ ಹಾಸ್ಟೆಲ್ ಒಳಗೇ ಹೋಮ್​ ಮೇಡ್ ಲ್ಯಾಬ್ ರೀತಿ ಮಾಡ್ಕೊಂಡು ಸ್ಪೋಟಕ ತಯಾರಿಸ್ತಿದ್ರು. ಬಂಧಿತ 9 ಮಂದಿ ಪ್ರಜಾಪ್ರಭುತ್ವ ಪರ ಹೋರಾಟದ ರಿಟರ್ನಿಂಗ್ ವೇಲಿಯಂಟ್ ಗ್ರೂಪ್​​ಗೆ ಸೇರಿದವರಾಗಿದ್ದಾರೆ ಅಂತ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ.. ಇವರೆಲ್ಲ ಸೇರಿಕೊಂಡು ಕ್ರಾಸ್ ಹಾರ್ಬರ್ ಟನಲ್, ರೈಲ್ವೆ ನೆಟ್ವರ್ಕ್​ ಮತ್ತು ಕೋರ್ಟ್​​ರೂಮ್​ ಸೇರಿದಂತೆ ಸಾರ್ವಜನಿಕ ಆಸ್ತಿಗಳ ಮೇಲೆ ದಾಳಿ ನಡೆಸೋಕೆ ಪ್ಲಾನ್ ಮಾಡಿದ್ರು ಅಂತ ಕೂಡ ಪೊಲೀಸರು ಆರೋಪಿಸಿದ್ಧಾರೆ. ಹೀಗೆ ಹಾಂಗ್​ಕಾಂಗ್​​ನಲ್ಲಿ ಪ್ರಜಾಪ್ರಭುತ್ವ ಚಿಗುರಿನಲ್ಲೇ ಚಿವುಟಿ ಹಾಕುತ್ತಿದೆ ಚೀನಾ.. 1997ರವರೆಗೆ ಬ್ರಿಟಿಷರ ನಿಯಂತ್ರಣದಲ್ಲಿದ್ದ ಈ ಭಾಗವನ್ನು ನಂತರದಲ್ಲಿ ಚೀನಾಗೆ ಬಿಟ್ಟುಕೊಡಲಾಗಿತ್ತು. ಈ ವೇಳೆ ಒಂದು ನಿರ್ದಿಷ್ಟ ಅವಧಿವರೆಗೆ ಹಾಂಗ್​ಕಾಂಗ್​​ಗೆ ವಿಶೇಷ ಸ್ಥಾನಮಾನ ನೀಡೋದಾಗಿಯೂ ಚೀನಾ ಹೇಳಿತ್ತು. ಅದರಂತೆ ಇಡೀ ಚೀನಾದಲ್ಲಿ ಕಮ್ಯೂನಿಸ್ಟ್ ಆಡಳಿತ ಇದ್ರೂ ಕೂಡ ಹಾಂಗ್​​​​ಕಾಂಗ್​ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯೇ ಇತ್ತು. ಆದ್ರೆ ಇದೀಗ ಚೀನಾ ರಾಷ್ಟ್ರೀಯ ಭದ್ರತಾ ಕಾನೂನು ಜಾರಿಗೆ ತಂದು ಇಲ್ಲಿನ ಪ್ರಜಾಪ್ರಭುತ್ವವನ್ನು ಹತ್ತಿಕ್ಕಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂ

Contact Us for Advertisement

Leave a Reply