ನೀರವ್ ಮೋದಿ ಸಹೋದರನಿಂದ ಮೋಸ.. ಬಿತ್ತು ಕಳ್ಳತನದ ಕೇಸ್​​..!

masthmagaa.com:

ಅಮೆರಿಕ: ಪಂಜಾಬ್ ನ್ಯಾಷನಲ್ ಬ್ಯಾಂಕ್​​ನಲ್ಲಿ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ, ಉದ್ದುದ್ದ ನಾಮ ತಿಕ್ಕಿ ವಿದೇಶಕ್ಕೆ ಓಡಿ ಹೋದ ನೀರವ್ ಮೋದಿ ನಿಮಗೆಲ್ಲಾ ಗೊತ್ತೇ ಇದೆ. ಈಗ ಆತನ ಸಹೋದರ ನೇಹಲ್ ಮೋದಿ ಕೂಡ ಮೋಸ ಮಾಡಿ ಸಿಕ್ಕಿಬಿದ್ದಿದ್ದಾನೆ. 2.6 ಮಿಲಿಯನ್ ಡಾಲರ್ ಅಂದ್ರೆ 19 ಕೋಟಿ ರೂಪಾಯಿ ಮೊತ್ತದ ವಜ್ರ ಕಳ್ಳತನದ ಆರೋಪ ಕೇಳಿ ಬಂದಿದೆ. ಅಮೆರಿಕದ ಮ್ಯಾನ್​​​ಹಟನ್ ಮೂಲದ ವಿಶ್ವದ ಅತಿದೊಡ್ಡ ವಜ್ರ ಕಂಪನಿಗಳಲ್ಲಿ ಒಂದಾದ ಎಲ್​​ಎಲ್​​ಡಿ ಸುಪ್ರೀಂಕೋರ್ಟ್​​ನಲ್ಲಿ ಮೇಜರ್ ಥೆಫ್ಟ್​ ಇನ್ ಫಸ್ಟ್ ಡಿಗ್ರಿ ಕೇಸ್ ದಾಖಲಿಸಿದೆ. ನ್ಯೂಯಾರ್ಕ್​​ನಲ್ಲಿ  ಮೇಜರ್ ಥೆಫ್ಟ್​ ಇನ್ ಫಸ್ಟ್ ಡಿಗ್ರಿ ಅಂದ್ರೆ 1 ಮಿಲಿಯನ್ ಡಾಲರ್​​ಗೂ ಅಧಿಕ ಮೊತ್ತದ ಮೋಸಕ್ಕೆ ಹಾಕಲಾಗುವ ಒಂದು ಪ್ರಕರಣ.. ಈ ಪ್ರಕರಣದಲ್ಲಿ ಆರೋಪ ಸಾಬೀತಾದ್ರೆ 25 ವರ್ಷಗಳವರೆಗೆ ಜೈಲು ಶಿಕ್ಷೆಯಾಗುತ್ತೆ.

ನೇಹಲ್ ಮೋದಿ ಮೊದಲಿಗೆ ಉದ್ಯಮಿಗಳ ಮುಖಾಂತರ ಎಲ್​ಎಲ್​ಡಿ ಕಂಪನಿಯ ಅಧ್ಯಕ್ಷರ ಜೊತೆ ಪರಿಚಯ ಬೆಳೆಸಿಕೊಂಡ.. ನಂತರ ಕ್ಯಾಸ್ಟ್​​​​ಕೋ ಹೋಲ್​ಸೇಲ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅವರಿಗೆ ತೋರಿಸಲು ವಜ್ರ ನೀಡುವಂತೆ ಎಲ್​ಎಲ್​​ಡಿ ಕಂಪನಿ ಅಧ್ಯಕ್ಷರ ಹಿಂದೆ ಬಿದ್ದ.. ಆತ್ಮೀಯರಾಗಿದ್ದರಿಂದ ಎಲ್​ಎಲ್​ಡಿ ಕಂಪನಿ ವಜ್ರವನ್ನು ನೇಹಲ್​​​​ಗೆ ನೀಡಿತ್ತು. ನಂತರ ಕ್ಯಾಸ್ಟ್​​ಕೋ ಕಂಪನಿ ವಜ್ರವನ್ನು ಖರೀದಿಸಲು ಒಪ್ಪಿಕೊಂಡಿದೆ.. ಹಣ ಪಾವತಿಗೆ 90 ದಿನಗಳ ಅವಧಿ ಬೇಕು ಎಂದು ಎಲ್​ಎಲ್​ಡಿ ಕಂಪನಿಗೆ ತಿಳಿಸಿದ್ದ.. ನಂತರದಲ್ಲಿ ಆ ವಜ್ರವನ್ನು ಕ್ಯಾಸ್ಟ್​​ಕೋ ಕಂಪನಿಗೆ ನೀಡುವ ಬದಲು ಅಡ ಇಟ್ಟು ಲೋನ್ ತೆಗೆದುಕೊಂಡಿದ್ದಾನೆ.. ಉದ್ಯಮ ಅದು ಇದು ಅಂತ ಸ್ವಂತಕ್ಕೆ ಖರ್ಚು ಮಾಡಿಕೊಂಡು ಎಲ್​​ಎಲ್​ಡಿ ಕಂಪನಿಗೆ ಮೋಸ ಮಾಡಿದ್ದಾರೆ ಅನ್ನೋದು ಆರೋಪ. ಇನ್ನು ಭಾರತದಲ್ಲೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ನೀರವ್ ಮೋದಿಯವಂತೆ ಈತ ಕೂಡ ಸಿಬಿಐ ವಾಂಟೆಡ್​ ಲಿಸ್ಟ್​​ನಲ್ಲಿದ್ದಾನೆ.

-masthmagaa.com

Contact Us for Advertisement

Leave a Reply