masthmagaa.com:

ಬಿಹಾರದ ಮುಂದಿನ ಸಿಎಂ ಆಗಿ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಆಯ್ಕೆಯಾಗಿದ್ದಾರೆ. ಪಾಟ್ನಾದಲ್ಲಿ ನಡೆದ ಎನ್​ಡಿಎ ಶಾಸಕರ ಸಭೆಯಲ್ಲಿ ಅವರನ್ನ ಶಾಸಕಾಂಗ ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯ್ತು. ನಾಳೆ 4ನೇ ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದ್ರೆ ಉಪಮುಖ್ಯಮಂತ್ರಿ ಸ್ಥಾನ ಬಿಜೆಪಿಯ ಸುಶಿಲ್ ಕುಮಾರ್ ಮೋದಿ ಕೈತಪ್ಪುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಯಾಕಂದ್ರೆ ಬಿಜೆಪಿಯ ತಾರ್​ಕಿಶೋರ್ ಪ್ರಸಾದ್ ಅವರನ್ನ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಹೀಗಾಗಿ ತಾರ್​ಕಿಶೋರ್ ಪ್ರಸಾದ್​ಗೆ ಡಿಸಿಎಂ ಕುರ್ಚಿ ಸಿಗುವ ಸಾಧ್ಯತೆ ಇದೆ.  ಎನ್​ಡಿಎ ಶಾಸಕರ ಸಭೆಯಲ್ಲಿ ರಕ್ಷಣಾ ಸಚಿವ ರಾಜ್​ನಾಥ್ ಸಿಂಗ್, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಮತ್ತು ಶಾಸಕರು ಭಾಗವಹಿಸಿದ್ದರು.

ಅಂದ್ಹಾಗೆ 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಮ್ಯಾಜಿಕ್ ನಂಬರ್ 122. ಅಂದ್ರೆ ಇಷ್ಟು ಕ್ಷೇತ್ರಗಳನ್ನ ಗೆದ್ದವರು ಸರ್ಕಾರ ರಚಿಸಬಹುದು. ಈ ಬಾರಿಯ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ 125 ಕ್ಷೇತ್ರಗಳನ್ನ ಗೆದ್ದಿತ್ತು. ಇದರಲ್ಲಿ ಬಿಜೆಪಿ-74, ಜೆಡಿಯು-43, ವಿಕಾಶ್​ಶೀಲ್ ಇನ್ಸಾನ್ ಪಾರ್ಟಿ(VIP)-4 ಮತ್ತು ಹಿಂದೂಸ್ಥಾನ್​ ಅವಾಮ್​ ಮೋರ್ಚಾ(HAM)-4 ಸೀಟುಗಳಲ್ಲಿ ಗೆಲುವು ಸಾಧಿಸಿತ್ತು. ಮೈತ್ರಿಕೂಟದಲ್ಲಿ ಅತಿ ಹೆಚ್ಚು ಸೀಟುಗಳನ್ನ ಬಿಜೆಪಿ ಗೆದ್ದಿದ್ದರೂ ಚುನಾವಣೆಗೂ ಮುನ್ನವೇ ಘೋಷಿಸಿದಂತೆ ಜೆಡಿಯು ಪಕ್ಷದ ನಿತೀಶ್ ಕುಮಾರ್​ ಅವರನ್ನೇ ಸಿಎಂ ಕುರ್ಚಿಯಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ. ಕಡಿಮೆ ಸೀಟು ಗೆದ್ದಿರುವ ನಿತೀಶ್ ಕುಮಾರ್ ಸಿಎಂ ಆಗಬಾರದು ಅಂತ ಕಾಂಗ್ರೆಸ್ ಮತ್ತು ಆರ್​ಜೆಡಿ ಪಕ್ಷಗಳು ಹೇಳಿವೆ.

-masthmagaa.com

Contact Us for Advertisement

Leave a Reply