ಕೊರೋನಾ ಹೆಸರಲ್ಲಿ ವರದಕ್ಷಿಣೆಗೆ ಬೇಡಿಕೆ…ಸೊಸೆಗೆ ಕಿರುಕುಳ..!

masthmagaa.com:

ದೆಹಲಿ: ಕೊರೋನಾ ವೈರಸ್​​​ಗೆ ವಿಶ್ವವೇ ಕಂಗೆಟ್ಟು ಹೋಗಿದ್ರೆ, ಇನ್ನು ಕೆಲವರಿಗೆ ಇದೇ ಬಂಡವಾಳವಾಗಿದೆ. ಒಡಿಶಾದಲ್ಲಿ ನವವಿವಾಹಿತೆಯೊಬ್ಬರಿಗೆ ಕೊರೋನಾ ಬಂದಿದೆ ಎಂದು ಸುಳ್ಳು ಆರೋಪ ಮಾಡಿ ಪತಿಯ ಕುಟುಂಬದವರು ಹಿಂಸೆ ಕೊಟ್ಟಿದ್ದಾರೆ. ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದು, ಕೊಡದೇ ಇದ್ದಾಗ ಕೂಡಿ ಹಾಕಿ ಹಿಂಸಿಸಿದ್ದಾರೆ. ಹೀಗಂತ ನವವಿವಾಹಿತೆ ದೂರು ನೀಡಿದ್ದಾರೆ. ಒಡಿಶಾದ ನಬರನ್​ಪುರ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ.

ಯುವತಿ ಜಯಂತ್ ಕುಮಾರ್ ಎಂಬುವವರನ್ನು ಮಾರ್ಚ್​ 2ರಂದು ಮದುವೆಯಾಗಿದ್ದರು. ಆದ್ರೆ ನಂತರದಲ್ಲಿ ಆಕೆ ಕೊರೋನಾ ವೈರಸ್ ಪೀಡಿತೆ ಅಂತ ಹೇಳಿ ಹಿಂಸಿಸಲಾಗಿದೆ. ಮದುವೆ ವೇಳೆಯೂ ಯುವತಿ ಕಡೆಯವರು ಎರಡೂವರೆ ಲಕ್ಷ ವರದಕ್ಷಿಣೆ, ಚಿನ್ನಾಭರಣ, ಬೈಕ್ ಮತ್ತು ಬೆಲೆಬಾಳುವ ವಸ್ತುಗಳನ್ನು ನೀಡಲಾಗಿತ್ತು. ಆದ್ರೆ ವರನ ಕಡೆಯವರು ಮತ್ತೂ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು.

ಮದುವೆ ವೇಳೆ ಆಯಾಸದಿಂದ ಯುವತಿಯಲ್ಲಿ ಕೆಮ್ಮು, ಶೀತ, ಜ್ವರ ಕಾಣಿಸಿಕೊಂಡಿದೆ. ಇಷ್ಟೇ ಕಾರಣಕ್ಕೆ ಕೊರೋನಾ ಬಂದಿದೆ ಅಂತ ಆರೋಪಿಸಿದ ಪತಿಯ ಮನೆಯವರು ನೆಲದ ಮೇಲೆ ಮಲಗುವಂತೆ ಮಾಡಿದ್ದಾರೆ. ಜೊತೆಗೆ ಮನೆಯ ಶೌಚಾಲಯವನ್ನು ಉಪಯೋಗಿಸಲು ಬಿಡದೇ ಕಿರುಕುಳ ನೀಡಿದ್ದಾರೆ.

-masthmagaa.com

Contact Us for Advertisement

Leave a Reply