masthmagaa.com:

ಡ್ರಗ್ಸ್ ಪ್ರಕರಣದಲ್ಲಿ ತಮ್ಮ ಹೆಸರು ಲಿಂಕ್ ಮಾಡುತ್ತಿರುವುದನ್ನು ತಡೆಯಬೇಕು ಅಂತ ನಟಿ ರಕುಲ್ ಪ್ರೀತ್ ಸಿಂಗ್ ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಅರ್ಜಿ ಸಲ್ಲಿಸಿರೋ 29 ವರ್ಷದ ರಕುಲ್, ‘ಬಾಲಿವುಡ್​ ನಟಿ ರಿಯಾ ಚಕ್ರಬರ್ತಿ ತನ್ನ ಹೆಸರನ್ನು ತೆಗೆದುಕೊಂಡಿದ್ದಾಳೆ ಅಂತ ಕೆಲ ಮಾಧ್ಯಮಗಳು ವರದಿ ಮಾಡುತ್ತಿವೆ. ಇದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ’ ಅಂತ ಹೇಳಿದ್ದಾರೆ.

ಈ ಹಿನ್ನೆಲೆ ದೆಹಲಿ ಹೈಕೋರ್ಟ್​ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ್ದು ಈ ವಿಚಾರದ ಕುರಿತು ಪ್ರತಿಕ್ರಿಯೆ ಕೇಳಿದೆ. ಈ ಸಂಬಂಧ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ನ್ಯೂಸ್​ ಬ್ರಾಡ್​ಕಾಸ್ಟರ್ಸ್​ ಅಸೋಸಿಯೇಷನ್ (NBA) ಮತ್ತು ಪ್ರೆಸ್​ ಕೌನ್ಸಿಲ್ ಆಫ್ ಇಂಡಿಯಾಗೆ ನೋಟಿಸ್ ನೀಡಲಾಗಿದೆ. ಜೊತೆಗೆ ಮುಂದಿನ ವಿಚಾರಣೆ ನಡೆಯಲಿರುವ ಅಕ್ಟೋಬರ್​ 15ರೊಳಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಅಂದ್ಹಾಗೆ ಬಾಲಿವುಡ್​ ಡ್ರಗ್ಸ್​ ಪ್ರಕರಣದಲ್ಲಿ ಎನ್​ಸಿಬಿಯಿಂದ ಅರೆಸ್ಟ್ ಆಗಿರೋ ಸುಶಾಂತ್ ಅವರ ಮಾಜಿ ಪ್ರೇಯಸಿ ಮತ್ತು ನಟಿ ರಿಯಾ ಚಕ್ರಬರ್ತಿ ವಿಚಾರಣೆ ವೇಳೆ 15 ಬಿ-ಗ್ರೇಡ್​ ನಟ-ನಟಿಯರ ಹೆಸರನ್ನು ತೆಗೆದುಕೊಂಡಿದ್ದಾರೆ ಅಂತ ವರದಿಯಾಗಿತ್ತು. ಅದರಲ್ಲಿ ರಕುಲ್ ಪ್ರೀತ್ ಸಿಂಗ್ ಅವರ ಹೆಸರೂ ಕೂಡ ತಳುಕುಹಾಕಿಕೊಂಡಿತ್ತು.

-masthmagaa.com

Contact Us for Advertisement

Leave a Reply