ಜಮ್ಮು-ಕಾಶ್ಮೀರದಲ್ಲಿ ಉಗ್ರರ ಬಿಲ ಪತ್ತೆ.. ಗ್ರೌಂಡ್ ವರ್ಕರ್ ಅರೆಸ್ಟ್..!

masthmagaa.com:

ಜಮ್ಮು-ಕಾಶ್ಮೀರದ ಬುದ್​ಗಾಮ್​ನ ಅರಿಝಲ್ ಖಾನ್​ಸಾಯಿಬ್​ ಬಳಿ ಉಗ್ರರ ಅಡಗುತಾಣವೊಂದನ್ನ ಭೇದಿಸಲಾಗಿದ್ದು, ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಗ್ರೌಂಡ್ ವರ್ಕರ್ ಝಹೂರ್ ವಾನಿ ಎಂಬಾತನನ್ನು ಅರೆಸ್ಟ್ ಮಾಡಲಾಗಿದೆ. ಆತನಿಂದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಝಹೂರ್ ವಾನಿ ಬಂಧನದೊಂದಿಗೆ ಮತ್ತಷ್ಟು ಜನರ ಬಂಧನ ಹಾಗೂ ಮತ್ತಷ್ಟು ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಳ್ಳುವ ನಿರೀಕ್ಷೆ ಇದೆ ಅಂತ ಜಮ್ಮು-ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದರು. ಅದರಂತೆ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಮತ್ತೆ ನಾಲ್ವರನ್ನು ಬಂಧಿಸಲಾಗಿದೆ. ಎಲ್ಲರೂ ಖಾನ್​ಸಾಯಿಬ್​ ನಿವಾಸಿಗಳಾಗಿದ್ದಾರೆ. ಕಳೆದ ಹಲವು ತಿಂಗಳಿನಿಂದ ಆ್ಯಕ್ಟಿವ್ ಆಗಿದ್ದ ಈ ಗುಂಪು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ ಮತ್ತು ಆಶ್ರಯ ನೀಡ್ತಿದ್ದರು ಅನ್ನೋದು ಗೊತ್ತಾಗಿದೆ.

-masthmagaa.com

Contact Us for Advertisement

Leave a Reply