ಹೈದ್ರಾಬಾದ್ ಪ್ರಚಾರಕ್ಕೆ ಟ್ರಂಪ್ ಒಬ್ರು ಬಾಕಿ: ಬಿಜೆಪಿಗೆ ಓವೈಸಿ ಗುನ್ನ

masthmagaa.com:

ಹೈದ್ರಾಬಾದ್​​: ಡಿಸೆಂಬರ್ 1ರಂದು ಹೈದ್ರಾಬಾದ್ ನಗರಪಾಲಿಕೆ ಚುನಾವಣೆ ಪ್ರಚಾರಕ್ಕೆ ದೊಡ್ಡ ದೊಡ್ಡ ನಾಯಕರನ್ನು ಇಳಿಸುತ್ತಿರುವ ಬಿಜೆಪಿಗೆ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ತಿರುಗೇಟು ಕೊಟ್ಟಿದ್ದಾರೆ. ಹೈದ್ರಾಬಾದ್​​ನ ಲ್ಯಾಂಗರ್​ ಹೌಸ್​​​ನಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಈ ನಗರದಲ್ಲಿ ಪ್ರಚಾರ ಮಾಡಲು ಬಾಕಿ ಉಳಿದಿರುವ ಒಬ್ಬೇ ಒಬ್ಬ ವ್ಯಕ್ತಿ ಅಂದ್ರೆ ಅದು ಡೊನಾಲ್ಡ್​ ಟ್ರಂಪ್.. ಅವರನ್ನು ಬಿಟ್ಟು ಬೇರೆ ಎಲ್ಲರೂ ಪ್ರಚಾರ ಮಾಡಿದಂತೆ ಆಯ್ತು ಅಂತ ಟಾಂಗ್ ಕೊಟ್ಟಿದ್ದಾರೆ.

ಜೊತೆಗೆ ನರೇಂದ್ರ ಮೋದಿಯವರ ಜಾಗಕ್ಕೆ ಹೊಸ ಪ್ರಧಾನಮಂತ್ರಿ ಆಯ್ಕೆಗೆ ಚುನಾವಣೆ ನಡೀತಾ ಇದೆ ಅಂತ ಅನ್ನಿಸುತ್ತಿದೆ. ನಾನು ಒಂದು ಸಮಾವೇಶದಲ್ಲಿ ಭಾಗಿಯಾಗಿದ್ದೆ. ಈ ವೇಳೆ ಬಿಜೆಪಿ ಕಡೆಯಿಂದ ಎಲ್ಲಾ ನಾಯಕರನ್ನು ಹೈದ್ರಾಬಾದ್​​​ಗೆ ಕರೆಯಲಾಗಿದೆ ಅಂತ ಮಾಹಿತಿ ಬಂತು.. ಆಗ ಅಲ್ಲಿದ್ದ ಓರ್ವ ಬಾಲಕ, ಬಿಜೆಪಿಯವರು ಡೊನಾಲ್ಡ್​ ಟ್ರಂಪ್ ಅವರನ್ನೂ ಕರೆಯಬೇಕಿತ್ತು ಅಂತ ಹೇಳಿದ. ನನಗೂ ಅದು ಸರಿ ಅನ್ನಿಸಿತು ಅಂತ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಹೈದ್ರಾಬಾದ್ ನಗರಪಾಲಿಕೆ ಚುನಾವಣೆಯನ್ನು ತುಂಬಾ  ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ದೊಡ್ಡ ದೊಡ್ಡ ನಾಯಕರನ್ನೇ ಹೈದ್ರಾಬಾದ್ ಚುನಾವಣಾ ಪ್ರಚಾರಕ್ಕೆ ಕಳುಹಿಸುತ್ತಿದೆ. ಗೃಹಸಚಿವ ಅಮಿತ್ ಶಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಸ್ಮೃತಿ ಇರಾನಿ ಸೇರಿದಂತೆ ದೊಡ್ಡ ದೊಡ್ಡ ನಾಯಕರು ಹೈದ್ರಾಬಾದ್​​ ನಗರಪಾಲಿಕೆ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗ್ತಿದ್ದಾರೆ.

-masthmagaa.com

Contact Us for Advertisement

Leave a Reply