ಬಾಲಿವುಡ್ ನಟರಿಬ್ಬರ ಹಳೆಯ ಕಟ್ಟಡ ಖರೀದಿಗೆ ಮುಂದಾದ ಪಾಕ್​​..!

masthmagaa.com:

ಪೇಶಾವರ: ಪಾಕಿಸ್ತಾನದ ಖೈಬರ್-ಪಖ್ತುಂಖ್ವಾದ ಪ್ರಾಂತೀಯ ಸರ್ಕಾರ ಖ್ಯಾತ ಬಾಲಿವುಡ್​​ ನಟರಾದ ರಾಜ್​ ಕಪೂರ್ ಮತ್ತು ದಿಲೀಪ್ ಕುಮಾರ್ ಅವರ ಮನೆಗಳನ್ನು ಖರೀದಿಸಲು ನಿರ್ಧರಿಸಿದೆ. ಶಿಥಿಲಗೊಂಡ ಮತ್ತು ತೆರವುಗೊಳಿಸಬೇಕಾದ ಸ್ಥಿತಿಯಲ್ಲಿರೋ ಈ ಕಟ್ಟಡವನ್ನು ಐತಿಹಾಸಿಕ ಕಟ್ಟಡಗಳ ರೂಪದಲ್ಲಿ ಇರಿಸಲು ಚಿಂತನೆ ನಡೆಸಿದೆ. ಖೈಬರ್-ಪಖ್ತುಂಖ್ವಾ ಪ್ರಾಂತ್ಯದ ಪುರಾತತ್ವ ಇಲಾಖೆ ಈ ಎರಡು ಕಟ್ಟಡಗಳನ್ನು ಖರೀದಿಸಲು ಹಣ ಬಿಡುಗಡೆ ಮಾಡಿದ್ದು, ಪೇಶಾವರ್ ನಗರದ ಹೃದಯಭಾಗದಲ್ಲಿರೋ ಈ ಕಟ್ಟಡವನ್ನು ರಾಷ್ಟ್ರೀಯ ಪರಂಪರೆಯಾಗಿ ಘೋಷಿಸಲು ಪ್ಲಾನ್ ಮಾಡಲಾಗಿದೆ. ಈ ಎರಡೂ ಕಟ್ಟಡಗಳನ್ನು 1918 ಮತ್ತು 1922ರಲ್ಲಿ ಈ ನಟರಿಬ್ಬರ ಅಜ್ಜಂದಿರು ಕಟ್ಟಿಸಿದ್ರು.

ಈಗಾಗಲೇ ಕಟ್ಟಡದ ಬೆಲೆ ನಿಗದಿಪಡಿಸುವಂತೆ ಪೇಶಾವರ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಸರ್ಕಾರ, ಈ ಜಾಗದಲ್ಲಿ ಭಾರತೀಯ ಚಿತ್ರರಂಗದ ಇಬ್ಬರು ಶ್ರೇಷ್ಠರು ವಿಭಜನೆಗೂ ಮುನ್ನ ಹುಟ್ಟಿ, ಬೆಳೆದಿದ್ದರು ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply