ಕ್ಷಿಪಣಿ ಮಿಸ್‌ಫೈರ್‌ ಕುರಿತು ಜಂಟಿ ತನಿಖೆಗೆ ಭಾರತವನ್ನ ಒತ್ತಾಯಿಸಿದ ಪಾಕಿಸ್ತಾನ!

masthmagaa.com:

ಕಳೆದ ಮಾರ್ಚ್‌ನಲ್ಲಿ ಭಾರತದಿಂದ ಹಾರಿ ಹೋಗಿ ಪಾಕಿಸ್ತಾನಕ್ಕೆ ಬಿದ್ದಿದ್ದ‌ ಬ್ರಹ್ಮೋಸ್‌ ಕ್ಷಿಪಣಿಯ ಕೇಸ್‌ಗೆ ಸಂಬಂಧಪಟ್ಟಂತೆ ಪಾಕ್‌ ಮತ್ತೆ ಸೊಲ್ಲೆತ್ತಿದ್ದು ಈ ಕುರಿತು ಜಂಟಿ ತನಿಖೆ ನಡೆಸಬೇಕು ಅಂತ ಹೇಳಿದೆ. ಅಂದ್ರೆ ಭಾರತ ಮತ್ತು ಪಾಕ್‌ ಎರಡೂ ದೇಶಗಳ ಅಧಿಕಾರಿಗಳನ್ನ ಒಳಗೊಂಡು ಈ ತನಿಖೆ ನಡೆಸಬೇಕು ಅಂತ. ಇತ್ತೀಚಿಗೆ ತಾನೇ ಈ ಪ್ರಕರಣಕ್ಕೆ ಸಂಬಂಧಿಸಿ ಮೂವರು ಅಧಿಕಾರಿಗಳನ್ನ ಭಾರತ ಸರ್ಕಾರ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಈಗ ಪಾಕ್‌ ಈ ರೀತಿ ಹೇಳಿದೆ. ಅಲ್ದೇ ನಿರೀಕ್ಷೆ ಮಾಡಿದಂತೆ ಘಟನೆಯ ನಂತರ ಭಾರತ ನಡೆಸಿದ ಇನ್ವೆಸ್ಟಿಗೇಶನ್‌ಗಳು, ಅನಂತರ ತೆಗೆದುಕೊಂಡ ಕ್ರಮಗಳು ಸಂಪೂರ್ಣವಾಗಿ ನಮಗೆ ತೃಪ್ತಿ ತಂದಿಲ್ಲ. ಇದು ಸಂಪೂರ್ಣ ಅಸಮರ್ಪಕ, ಕೊರತೆಯಿಂದ ಕೂಡಿದೆ ಅಂತ ಹೇಳಿದೆ. ಅಲ್ದೇ ಇದು ಗಂಭೀರ ವಿಚಾರ. ಪಾಕಿಸ್ತಾನ ಇಂತಹ ಕ್ರಮಗಳನ್ನ ಒಪ್ಪಿಕೊಳ್ಳೋದಿಲ್ಲ. ಭಾರತ ನಮ್ಮಿಂದ ಯಾವುದನ್ನೂ ಮುಚ್ಚಿಡ್ತಿಲ್ಲ ಅಂದ್ರೆ ಜಂಟಿ ತನಿಖೆಗೆ ಒಪ್ಪಿಕೊಳ್ಳಲೇಬೇಕು ಅಂತ ಭಾರತಕ್ಕೆ ತಾಕೀತು ಮಾಡಿದೆ ಪಾಕಿಸ್ತಾನ.

-masthmagaa.com

Contact Us for Advertisement

Leave a Reply