ಕಿಮ್-ಖಾನ್ ವಿಷಕೂಟ! ಜಿನ್​ಪಿಂಗ್ ಅಂಕಲ್ ಮೈತ್ರಿ ಮಾಟ!

masthmagaa.com:

ಪರಮಾಣು ಬಾಂಬ್ ಸೇರಿದಂತೆ ವಿನಾಶಕಾರಿ ಮಿಸೈಲ್​​ಗಳನ್ನು ಹೊಂದಿರೋ ಉತ್ತರ ಕೊರಿಯಾ ಜೊತೆಗೆ ಭಾರತದ ಶತ್ರು ಪಾಕಿಸ್ತಾನದ ಸ್ನೇಹ ಬೆಳೆಯುತ್ತಾ ಇದೆ. ಇವರಿಬ್ಬರ ಮಿತ್ರತ್ವಕ್ಕೆ ಚೀನಾ ಶಕುನಿ ಪಾತ್ರ ನಿಭಾಯಿಸ್ತಾ ಇದೆ. ಒಟ್ನಲ್ಲಿ ಮೂವರ ನಡುವಿನ ಗಾಢ ಫ್ರೆಂಡ್ಶಿಪ್​ ಭಾರತಕ್ಕೆ ಹೊಸ ತಲೆನೋವು ಶುರು ಮಾಡಿದೆ. ಕಳೆದ ವರ್ಷ ಗುಜರಾತ್​ನ ಕಂಡಾಲಾ ಬಂದರಿನಲ್ಲಿ ಚೀನೀ ಹಡಗು ಡಾಯ್ ಕುಯ್ ಯುನ್​​ ಹಡಗು ಪತ್ತೆಯಾಗಿತ್ತು. ಅದ್ರಲ್ಲಿ ದೂರದ ರೇಂಜ್​​ನ ಮಿಸೈಲ್​ಗಳಲ್ಲಿ ಬಳಸೋ ಆಟೋಕ್ಲೇವ್ ವಶಕ್ಕೆ ಪಡೆಯಲಾಗಿತ್ತು. ಇದು ಚೀನಾದಿಂದ ಪಾಕಿಸ್ತಾನದ ಕರಾಚಿಯ ಬಂದರಿಗೆ ಹೋಗ್ತಿತ್ತು. ಪಾಕ್ ಈ ಆಟೋಕ್ಲೇವ್​​ನ್ನು ಶಾಹೀನ್​ ಮಿಸೈಲ್​​ನಲ್ಲಿ ಬಳಸೋ ಪ್ಲಾನ್ ಹಾಕ್ಕೊಂಡಿತ್ತು ಅಂತ ಕೂಡ ಮಾಹಿತಿ ಸಿಕ್ಕಿತ್ತು. ಇದ್ರ ಬೆನ್ನಲ್ಲೇ ಈಗ ಕಳೆದ 3 ವರ್ಷಗಳಲ್ಲಿ ಉತ್ತರ ಕೊರಿಯಾದ 1718 ಹಡಗುಗಳು ವಿಶ್ವದ ವಿವಿಧ ದೇಶಗಳಿಗೆ ರಹಸ್ಯವಾಗಿ ಹೋಗಿ ಬಂದಿರೋ ವಿಚಾರ ಗೊತ್ತಾಗಿದೆ. ಇವುಗಳಲ್ಲಿ ಎಷ್ಟು ಚೀನಾ ಮತ್ತು ಪಾಕಿಸ್ತಾನಕ್ಕೆ ಹೋಗಿವೆ. ಅದ್ರಲ್ಲಿ ಏನೆಲ್ಲಾ ವಸ್ತುಗಳನ್ನು ಸಾಗಿಸಲಾಗಿದೆ ಅನ್ನೋ ವಿಚಾರ ಮಾತ್ರ ಸ್ಪಷ್ಟವಾಗಿಲ್ಲ. ಈ ವಿಚಾರವಾಗಿ ಅಮೆರಿಕ ಮತ್ತು ಭಾರತ ಸೇರಿದಂತೆ ಹಲವು ದೇಶಗಳು ಆತಂಕ ವ್ಯಕ್ತಪಡಿಸಿವೆ. 2020ರ ಮೇ ತಿಂಗಳಲ್ಲಿ ಜರ್ಮನ್​​ನ ವರದಿಯೊಂದರಲ್ಲಿ ಚೀನಾ, ಉತ್ತರ ಕೊರಿಯಾ ಮತ್ತು ಪಾಕಿಸ್ತಾನ ಒಟ್ಟಾಗಿ ಸೇರಿಕೊಂಡು ಪರಮಾಣು, ಜೈವಿಕ ಮತ್ತು ರಾಸಾಯನಿಕ ಶಸ್ತ್ರಾಸ್ತ್ರಗಳ ವಿಚಾರವಾಗಿ ಒಪ್ಪಂದ ಏರ್ಪಟ್ಟಿದೆ ಅಂತ ಮಾಹಿತಿ ನೀಡಲಾಗಿತ್ತು. ಅಂದಹಾಗೆ ಈ ಹಿಂದೆ ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳ ಜನಕ ಅಂತ ಕರೆಯಲ್ಪಡುವ ಎಕ್ಯೂ ಖಾನ್​​​​ ಉತ್ತರ ಕೊರಿಯಾಗೆ ಪರಮಾಣು ಶಸ್ತ್ರಾಸ್ತ್ರದ ತಂತ್ರಜ್ಞಾನ ಕೊಟ್ಟಿದ್ದಾರೆ ಅನ್ನೋ ಆರೋಪ ಕೇಳಿ ಬಂದಿತ್ತು.

Contact Us for Advertisement

Leave a Reply