ಪಾಕಿಸ್ತಾನಕ್ಕೆ ಧಾಳಿ ಇಟ್ಟ ಡೆಲ್ಟಾ ರೂಪಾಂತರಿ!

masthmagaa.com:

ಭಾರತದಲ್ಲಿ ಹಾವಳಿ ಇಟ್ಟು ಅಪಾರ ಸಾವುನೋವಿಗೆ ಕಾರಣವಾದ ಕೊರೋನಾದ ವೇಷಧಾರಿ ಡೆಲ್ಟಾ ತಳಿ ಈಗ ಪಾಕಿಸ್ತಾನದಲ್ಲಿ ಹಾವಳಿ ಶುರು ಹಚ್ಕೊಂಡಿದೆ. ಯಾವ ಮಟ್ಟಿಗೆ ಅಂದ್ರೆ ಪಾಕಿಸ್ತಾನದ ಮುಂಬೈ ಅಂತ ಕರೆಸಿಕೊಳ್ಳೋ ಕರಾಚಿಯಲ್ಲಿ ಆಸ್ಪತ್ರೆಗಳು ಫುಲ್ ತುಂಬಿ ತುಳುಕ್ತಿವೆ. ರೋಗಿಗಳು ಆಸ್ಪತ್ರೆಗೆ ಹೋದ್ರೂ ಬೆಡ್ ಖಾಲಿ ಇಲ್ಲ ಅಂತ ವಾಪಸ್ ಕಳುಹಿಸಲಾಗ್ತಿದೆ. ದಿನದಿಂದ ದಿನಕ್ಕೆ ಕರಾಚಿ ಪರಿಸ್ಥಿತಿ ಹದಗೆಡ್ತಾ ಸಾಗ್ತಿದೆ ಅಂತ ಸರ್ಕಾರ ತಿಳಿಸಿದೆ. ಎಷ್ಟರ ಮಟ್ಟಿಗೆ ಅಂದ್ರೆ ಕರಾಚಿಯಲ್ಲಿ ಪಾಸಿಟಿವಿಟಿ ದರ 25.7 ಪರ್ಸೆಂಟ್​ಗೆ ಏರಿಕೆಯಾಗಿದ್ದು, ಹೊಸ ಪ್ರಕರಣಗಳಲ್ಲಿ 92.2ರಷ್ಟು ಡೆಲ್ಟಾ ಪ್ರಕರಣಗಳೇ ಆಗಿವೆ. ಪಾಕಿಸ್ತಾನದಲ್ಲಿ 5.25 ಪರ್ಸೆಂಟ್​​​ನಷ್ಟು ಪಾಸಿಟಿವಿಟಿ ದರ ಇದೆ. ಬರೀ ಸರ್ಕಾರಿ ಆಸ್ಪತ್ರೆಗಳು ಮಾತ್ರವಲ್ಲ.. ಖಾಸಗಿ ಆಸ್ಪತ್ರೆಗಳ ಪರಿಸ್ಥಿತಿ ಕೂಡ ಹದಗೆಟ್ಟು ಹೋಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಪಾಕಿಸ್ತಾನ್ ಮೆಡಿಕಲ್ ಅಸೋಸಿಯೇಷನ್ ಮುಖ್ಯಸ್ಥ ಡಾಕ್ಟರ್ ಸಜ್ಜಾದ್ ಕೈಸರ್​​​​, ಅಲ್ಲಾ ನಮ್ಮನ್ನು ರಕ್ಷಿಸು. ಜನ ಕೊರೋನಾವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಬಕ್ರೀದ್ ಹಬ್ಬದ ವೇಳೆ ಕೊರೋನಾ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಅಂತ ಎಚ್ಚರಿಸಿದ್ದಾರೆ. ಅಂದಹಾಗೆ ಸಿಂಧ್ ಪ್ರಾಂತ್ಯವೊಂದ್ರಲ್ಲೇ ಕಳೆದ 24 ಗಂಟೆಗಳಲ್ಲಿ 1648 ಪ್ರಕರಣಗಳು ವರದಿಯಾಗಿದ್ದು, ಇದ್ರಲ್ಲಿ 1366 ಕರಾಚಿಯಲ್ಲೇ ಪತ್ತೆಯಾಗಿದೆ.

-masthmagaa.com

Contact Us for Advertisement

Leave a Reply