ಆಕ್ಸ್​ಫರ್ಡ್ ಲಸಿಕೆ: ಸೀರಂ ಕಂಪನಿಗೆ ಭೇಟಿ ನೀಡ್ತಾರೆ ಪ್ರಧಾನಿ ಮೋದಿ

masthmagaa.com:

ಆಕ್ಸ್‌ಫರ್ಡ್‌ ಲಸಿಕೆಯನ್ನ ಭಾರತದಲ್ಲಿ ಉತ್ಪಾದಿಸುತ್ತಿರುವ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಕಂಪನಿಗೆ ಪ್ರಧಾನಿ ಮೋದಿ ಇದೇ ಶನಿವಾರ (ನವೆಂಬರ್ 28ರಂದು) ಭೇಟಿ ನೀಡ್ತಾರೆ ಅಂತ ಗೊತ್ತಾಗಿದೆ. ಈ ವೇಳೆ ಪ್ರಾಯೋಗಿಕವಾಗಿ ಲಸಿಕೆ ಪಡೆದ ಸ್ವಯಂ ಸೇವಕರ ಆರೋಗ್ಯ, ಲಸಿಕೆ ಉತ್ಪಾದನೆ ಸ್ಟೇಟಸ್, ಲಸಿಕೆ ಪೂರೈಕೆ ತಯಾರಿಗಳ ಬಗ್ಗೆ ಪರಿಶೀಲನೆ ನಡೆಸುತ್ತಾರೆ ಎನ್ನಲಾಗಿದೆ. ಅಂದ್ಹಾಗೆ ಜಗತ್ತಿನಲ್ಲಿ ಲಸಿಕೆ ಉತ್ಪಾದನೆಯ ಅತಿ ದೊಡ್ಡ ಕಂಪನಿ ಭಾರತದ ಸೀರಂ ಇನ್​ಸ್ಟಿಟ್ಯೂಟ್​ ಆಗಿದೆ. ಕೊರೋನಾ ಲಸಿಕೆಗೆ ಸಂಬಂಧಿಸಿದಂತೆ ಈ ಕಂಪನಿ ಆಕ್ಸ್​ಫರ್ಡ್ ಯುನಿವರ್ಸಿಟಿ ಮತ್ತು ಆಸ್ಟ್ರಾಝೆನೆಕಾ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ.

-masthmagaa.com

Contact Us for Advertisement

Leave a Reply