masthmagaa.com:

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಮಹಾಘಟಬಂಧನ್​ನಲ್ಲಿ ಒಡಕು ಕಾಣಿಸಿಕೊಂಡಿದೆ. ಈ ಸೋಲಿಗೆ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿಯೇ ಕಾರಣ ಅಂತ ಮೈತ್ರಿ ಪಕ್ಷವಾದ ಆರ್​ಜೆಡಿ ಇದೇ ಮೊದಲ ಬಾರಿ ಬಹಿರಂಗವಾಗಿ ವಾಗ್ದಾಳಿ ನಡೆಸಿದೆ. ‘ಬಿಹಾರದಲ್ಲಿ ಚುನಾವಣೆ ನಡೆಯುತ್ತಿದ್ದಾಗ ರಾಹುಲ್ ಗಾಂಧಿ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಅವರ ಶಿಮ್ಲಾ ನಿವಾಸಕ್ಕೆ ಪಿಕ್​ನಿಕ್ ಹೋಗಿದ್ದರು. ಇದನ್ನ ನೋಡಿದ್ರೆ ಗೊತ್ತಾಗುತ್ತೆ ಬಿಹಾರ ಚುನಾವಣೆಯನ್ನ ರಾಹುಲ್ ಗಾಂಧಿ ಎಷ್ಟು ಗಂಭೀರವಾಗಿ ಪರಿಗಣಿಸಿದ್ರು ಅಂತ. ಒಂದು ಪಕ್ಷವನ್ನ ಮುನ್ನಡೆಸೋದು ಹೀಗೆನಾ..?’ ಅಂತ ಆರ್​ಜೆಡಿ ಹಿರಿಯ ನಾಯಕ ಶಿವಾನಂದ ತಿವಾರಿ ವಾಗ್ದಾಳಿ ನಡೆಸಿದ್ದಾರೆ.

‘ರಾಹುಲ್ ಗಾಂಧಿ ಬಿಹಾರದಲ್ಲಿ ಕೇವಲ ಮೂರು ದಿನ ಪ್ರಚಾರ ಮಾಡಿದ್ರು. ಒಂದು ದಿನಕ್ಕೆ ಕೇವಲ 2 ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ರು. ಆದ್ರೆ ರಾಹುಲ್​ ಗಾಂಧಿಗಿಂತ ವಯಸ್ಸಿನಲ್ಲಿ ದೊಡ್ಡವರಾದ ಪ್ರಧಾನಿ ಮೋದಿ ದಿನಕ್ಕೆ 3ರಿಂದ 4 ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ರು. 70 ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದ ಕಾಂಗ್ರೆಸ್ ಕನಿಷ್ಠ 70 ಚುನಾವಣಾ ಸಭೆಗಳನ್ನ ನಡೆಸಿಲ್ಲ. ಬಿಹಾರ ಚುನಾವಣೆಯನ್ನ ಅವರು ಎಷ್ಟು ಗಂಭೀರವಾಗಿ ತೆಗೆದುಕೊಂಡ್ರು ಅನ್ನೋದಕ್ಕೆ ಇದು ಮತ್ತೊಂದು ಉದಾಹರಣೆ. ಅಷ್ಟೇ ಅಲ್ಲ ಇಡೀ ದೇಶವೇ ಕುತೂಹಲದಿಂದ ನೋಡ್ತಿದ್ದ ಬಿಹಾರ ಚುನಾವಣಾ ಪ್ರಚಾರಕ್ಕೆ ಪ್ರಿಯಾಂಕಾ ಗಾಂಧಿ ಕೂಡ ಬರಲಿಲ್ಲ’ ಅಂತ ಶಿವಾನಂದ ತಿವಾರಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply