ಬಿಹಾರದಲ್ಲಿ ನಿತೀಶ್ ಸರ್ಕಾರಕ್ಕೆ ಶಾಕ್! 17 ಶಾಸಕರು RJD ಸಂಪರ್ಕದಲ್ಲಿ?

masthmagaa.com:

ಬಿಹಾರದಲ್ಲಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿರುವ ಜೆಡಿಯು ಮತ್ತು ಬಿಜೆಪಿ ನಡುವೆ ಮನಸ್ತಾಪ ಉಂಟಾಗಿದೆ ಅಂತ ಚರ್ಚೆ ನಡೀತಿದೆ. ಅರುಣಾಚಲ ಪ್ರದೇಶದಲ್ಲಿ 6 ಮಂದಿ ಜೆಡಿಯು ಶಾಸಕರು ಬಿಜೆಪಿಗೆ ಪಕ್ಷಾಂತರ ಆಗಿದ್ದು, ಅದಾದ ಬಳಿಕ ಜೆಡಿಯು ಅಧ್ಯಕ್ಷ ಸ್ಥಾನಕ್ಕೆ ನಿತೀಶ್​ ಕುಮಾರ್​ ಬೇರೆಯವರನ್ನ ನೇಮಿಸಿದ್ದು, ನಂಗೆ ಸಿಎಂ ಆಗೋ ಆಸೆಯೇ ಇರಲಿಲ್ಲ ಅಂತ ಹೇಳಿದ್ದು ಇದಕ್ಕೆ ಪುಷ್ಟಿ ನೀಡಿದಂತಿದೆ. ಇದರ ನಡುವೆ ಜೆಡಿಯು ಪಕ್ಷದ 17 ಮಂದಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಅಂತ ಆರ್​ಜೆಡಿ ಹೇಳಿದೆ. 17 ಶಾಸಕರು ನಮ್ಮ ಪಕ್ಷವನ್ನ ಸೇರಲು ರೆಡಿ ಇದ್ದಾರೆ. ಆದ್ರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗೋದ್ರಿಂದ ನಾವೇ ಬೇಡ ಅಂದಿದ್ದೀವಿ. 28 ಶಾಸಕರು ಬಂದ್ರೆ ಮಾತ್ರ ನಾವು ಅವರನ್ನ ಪಕ್ಷಕ್ಕೆ ವೆಲ್​ಕಂ ಮಾಡ್ತೀವಿ ಅಂತ RJD ನಾಯಕರೊಬ್ಬರು ಹೇಳಿದ್ದಾರೆ. ಆದ್ರೆ ಇದು ಸುಳ್ಳು ಅಂತ ನಿತೀಶ್ ಕುಮಾರ್ ಹೇಳಿದ್ದಾರೆ. ನಿನ್ನೆ ಮತ್ತೊಬ್ಬ RJD ನಾಯಕ, ‘ನಿತೀಶ್ ಕುಮಾರ್ ಮಹಾಘಟಬಂದನ್​ ಜೊತೆ ಕೈಜೋಡಿಸಬೇಕು. ಸಿಎಂ ಕುರ್ಚಿಯನ್ನ ತೇಜಸ್ವಿ ಯಾದವ್​ಗೆ ಬಿಟ್ಟು ಕೊಡಬೇಕು. ಇದಕ್ಕೆ ಪ್ರತಿಯಾಗಿ ನಾವು ನಿತೀಶ್ ಕುಮಾರ್ ಅವರನ್ನ ಪ್ರಧಾನಿ ಅಭ್ಯರ್ಥಿಯಾಗಿ ಮಾಡ್ತೇವೆ’ ಅಂತ ಹೇಳಿದ್ದರು.

-masthmagaa.com

Contact Us for Advertisement

Leave a Reply