ಮಾಲೀಕನ ಜೀವ ತೆಗೆದ ಅಂಕದ ಕೋಳಿ!

masthmagaa.com:

ತೆಲಂಗಾಣ: ಕೋಳಿ ಅಂಕ ನಿಮಗೆಲ್ಲಾ ಗೊತ್ತಿರಬೇಕು.. ಒಂಥರಾ ಜೂಜು ಇದ್ದಂಗೆ.. ಆದ್ರೆ ಇದು ಕಾನೂನು ಬಾಹಿರ.. ಇದೇ ಕೋಳಿ ಅಂಕಕ್ಕೆ ತೆಲಂಗಾಣದ ಲೊಥುನುರ್​​ನಲ್ಲಿ ವ್ಯಕ್ತಿಯೊಬ್ಬ ಜೀವ ಬಿಟ್ಟಿದ್ದಾನೆ.. ಕೋಳಿ ಅಂಕದಲ್ಲಿ ಎರಡು ಕೋಳಿಗಳಿಗೆ ಕಾಲಿಗೆ ಬ್ಲೇಡ್ ಕಟ್ಟಿ ಅಖಾಡಕ್ಕೆ ಬಿಡಲಾಗುತ್ತೆ. ಯಾವ ಕೋಳಿ ಹೆಚ್ಚು ಹೊತ್ತು ಬದುಕುತ್ತೋ ಆ ಕೋಳಿ, ಆ ಕೋಳಿ ಮಾಲೀಕ ವಿನ್ ಆದಂಗೆ.. ಅದೇ ರೀತಿ ಇಲ್ಲೂ ಕೋಳಿ ಅಂಕಕ್ಕೆ ಅಂತ ಕೋಳಿ ಕಾಲಿಗೆ ಬ್ಲೇಡ್ ಕಟ್ಟಿ ಇನ್ನೇನು ಅಖಾಡಕ್ಕೆ ಇಳಿಸಬೇಕು ಅನ್ನುವಷ್ಟರಲ್ಲಿ ಕೋಳಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದೆ. ಈ ವೇಳೆ ಅದರ ಕಾಲಿಗೆ ಕಟ್ಟಿದ್ದ ಬ್ಲೇಡ್ ವ್ಯಕ್ತಿಗೆ ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯ್ತಾದ್ರೂ ಪ್ರಯೋಜನ ಆಗಲಿಲ್ಲ.. ವ್ಯಕ್ತಿ ಜೀವ ಬಿಟ್ಟಿದ್ದಾನೆ. ಇಲ್ಲಿ ತಪ್ಪು ಯಾರದ್ದು..? ಕೋಳಿಯದ್ದಾ? ಮನುಷ್ಯರದ್ದಾ..? ಸದ್ಯ ಕೋಳಿ ಅಂಕ ಏರ್ಪಾಡು ಮಾಡಿದ್ದ ಉಳಿದ 15 ಮಂದಿಗೆ ಪೊಲೀಸರು ಬಲೆ ಬೀಸಿದ್ದಾರೆ.

-masthmagaa.com

Contact Us for Advertisement

Leave a Reply