ಕನ್ನಡದ ಖ್ಯಾತ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ

masthmagaa.com:

ಬೆಂಗಳೂರು: ಸ್ಯಾಂಡಲ್​ವುಡ್​ನ ಖ್ಯಾತ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 39 ವರ್ಷ ವಯಸ್ಸಾಗಿತ್ತು. ಇವತ್ತು ಮಧ್ಯಾಹ್ನ ಹೃದಾಯಾಘಾತ ಉಂಟಾಗಿತ್ತು. ಈ ಹಿನ್ನೆಲೆ ಅವರನ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಚಿರಂಜೀವಿ ಸರ್ಜಾ ಚಿರ ನಿದ್ರೆಗೆ ಜಾರಿದ್ದಾರೆ. ಚೀನಾ ಸೋಂಕಿನ ಪರೀಕ್ಷೆಗಾಗಿ ಅವರ ಗಂಟಲು ದ್ರವದ ಮಾದರಿಯನ್ನ ಕಳುಹಿಸಿಕೊಡಲಾಗಿದೆ.

ಚಿರಂಜೀವಿ ಸರ್ಜಾ 2009ರಲ್ಲಿ ತೆರೆಕಂಡ ವಾಯುಪುತ್ರ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸಿದ್ದರು. ರುದ್ರತಾಂಡವ, ವರದನಾಯಕ, ವಾಯುಪುತ್ರ, ಚಿರು ಸೇರಿದಂತೆ 22 ಚಿತ್ರಗಳಲ್ಲಿ ನಟಿಸಿದ್ದಾರೆ. ಎರಡು ವರ್ಷದ ಹಿಂದೆಯಷ್ಟೇ ನಟಿ ಮೇಘನಾ ರಾಜ್ ಜತೆ ಮದುವೆಯಾಗಿತ್ತು. ಚಿರಂಜೀವಿ ಹಾಗೂ ಮೇಘನಾ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದರು ಅನ್ನೋದು ಗೊತ್ತಾಗಿದೆ.

-masthmagaa.com

Contact Us for Advertisement

Leave a Reply