masthmagaa.com:

ಪಾಕಿಸ್ತಾನದಲ್ಲಿರುವ ಕರಾಚಿ ಬಗ್ಗೆ ಭಾರತದಲ್ಲಿ ಈಗ ಭಾರಿ ಚರ್ಚೆ ನಡೆಯುತ್ತಿದೆ. ಅದಕ್ಕೆ ಕಾರಣ ಕರಾಚಿ ಹೆಸರಿನ ಸ್ವೀಟ್ಸ್ ಮತ್ತು ಬೇಕರಿಗಳು. ಹೌದು, ಮುಂಬೈನ ಬಾಂದ್ರಾ ಪ್ರದೇಶದಲ್ಲಿ ‘ಕರಾಚಿ ಸ್ವೀಟ್ಸ್’ ಅಂತ ಒಂದು ಬೇಕರಿ ಇದೆ. ಆದ್ರೆ ಕರಾಚಿ ಅನ್ನೋ ಹೆಸರು ಶಿವಸೇನೆ ನಾಯಕ ನಿತಿನ್ ನಂದಗಾಂವ್ಕರ್ ಎಂಬುವವರಿಗೆ ಇಷ್ಟವಾಗಿಲ್ಲ. ಸೋ ಬೇಕರಿಗೆ ಹೋದ ಆತ ಕರಾಚಿ ಪದವನ್ನ ತೆಗೆಯಿರಿ ಅಂತ ಮಾಲೀಕರಿಗೆ ಎಚ್ಚರಿಸಿದ್ದಾರೆ. ಇದಕ್ಕೆ ಮಣಿದ ಮಾಲೀಕರು ‘ಕರಾಚಿ ಸ್ವೀಟ್ಸ್’ ಬೋರ್ಡ್​ಗೆ ಪೇಪರ್ ಅಂಟಿಸಿದ್ದಾರೆ. ಇದರ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಶಿವಸೇನೆ ಸಂಸದ ಸಂಜಯ್ ರಾವತ್, ‘ಕಳೆದ 60 ವರ್ಷಗಳಿಂದ ಕರಾಚಿ ಬೇಕರಿ ಮತ್ತು ಕರಾಚಿ ಸ್ವೀಟ್ಸ್​ನ ಅಂಗಡಿಗಳು ಮುಂಬೈನಲ್ಲಿವೆ. ಅವುಗಳಿಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಬೇಕರಿಯ ಹೆಸರನ್ನ ಬದಲಾಯಿಸಿ ಅನ್ನೋದ್ರಲ್ಲಿ ಅರ್ಥಾನೇ ಇಲ್ಲ. ಕರಾಚಿ ಹೆಸರನ್ನ ತೆಗೆಯಬೇಕು ಅನ್ನೋದು ಶಿವಸೇನೆಯ ಅಧಿಕೃತ ಹೇಳಿಕೆ ಅಲ್ಲ’ ಅಂತ ಹೇಳಿದ್ದಾರೆ. ಅಂದ್ಹಾಗೆ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ಕರಾಚಿ ಬೇಕರಿ ಇದೆ.

-masthmagaa.com

Contact Us for Advertisement

Leave a Reply