masthmagaa.com:

ಮಾರ್ಚ್ ಕೊನೆಯ ವಾರದಿಂದ ಬಂದ್ ಆಗಿರುವ ಶಾಲಾ-ಕಾಲೇಜುಗಳನ್ನ ಹಂತ ಹಂತವಾಗಿ ತೆರೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಆರಂಭದಲ್ಲಿ 9ರಿಂದ 12ನೇ ತರಗತಿವರೆಗಿನ ಶಾಲೆಗಳನ್ನು ಸೆಪ್ಟೆಂಬರ್ 21ರಿಂದ ಓಪನ್ ಮಾಡಲು ಅವಕಾಶ ಮಾಡಿಕೊಟ್ಟಿದೆ. ಆದ್ರೆ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಶಾಲೆ ಅಥವಾ ಕಾಲೇಜಿಗೆ ಬರಬೇಕು ಅಂತೇನಿಲ್ಲ. ಯಾರಿಗೆ ಇಷ್ಟ ಇದೆಯೋ ಅಂತಹವರು ತಮ್ಮ ಪೋಷಕರಿಂದ ಅನುಮತಿ ಪತ್ರದ ಜೊತೆಗೆ ಶಾಲೆಗೆ ಬರಬೇಕು. ಈ ಸಂಬಂಧ ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

– ವಿದ್ಯಾರ್ಥಿಗಳ ನಡುವೆ ಮತ್ತು ವಿದ್ಯಾರ್ಥಿ-ಶಿಕ್ಷಕರ ನಡುವೆ ಕನಿಷ್ಠ 6 ಅಡಿಗಳಷ್ಟು ದೈಹಿಕ ಅಂತರವನ್ನು ಕಾಪಾಡಬೇಕು.

– ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.

– ಸಾಬೂನಿನಂದ ಆಗಾಗ ಕೈ ತೊಳೆಯಲು ಮತ್ತು ಹ್ಯಾಂಡ್​ ಸ್ಯಾನಿಟೈಸರ್​ನಿಂದ ಕೈಯನ್ನು ಸ್ವಚ್ಛಗೊಳಿಸಲು ವ್ಯವಸ್ಥೆ ಇರಬೇಕು.

– ಎಲ್ಲರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಅನಾರೋಗ್ಯ ಕಾಣಿಸಿಕೊಂಡರೆ ತಕ್ಷಣ ಮಾಹಿತಿ ನೀಡಬೇಕು.

– ಶಾಲೆ ಮತ್ತು ಕಾಲೇಜು ಆವರಣದಲ್ಲಿ ಉಗುಳುವುದನ್ನ ಸಂಪೂರ್ಣವಾಗಿ ನಿಷೇಧಿಸಬೇಕು.

– ಆರೋಗ್ಯ ಸೇತು ಅಪ್ಲಿಕೇಶನ್ ಬಳಕೆಗೆ ಉತ್ತೇಜನ ನೀಡಬೇಕು.

– ಆನ್​ಲೈನ್ ಶಿಕ್ಷಣ ಮುಂದುವರಿಸಲು ಅವಕಾಶ. ಆನ್​ಲೈನ್ ಶಿಕ್ಷಣಕ್ಕೆ ಉತ್ತೇಜನ.

– ಕಂಟೈನ್​ಮೆಂಟ್​ ಝೋನ್​ಗಳಲ್ಲಿರುವ ಶಾಲೆಗಳನ್ನ ತೆರೆಯುವಂತಿಲ್ಲ. ಕಂಟೈನ್​ಮೆಂಟ್​ ಝೋನ್​ಗಳಲ್ಲಿರುವ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗೆ ಅವಕಾಶವಿಲ್ಲ. ಬೇರೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಕಂಟೈನ್​ಮೆಂಟ್​ ಝೋನ್​ಗಳಿಗೆ ಹೋಗಬಾರದು.

– ಶಾಲೆ, ಕಾಲೇಜುಗಳನ್ನು ತೆರೆಯುವ ಮುನ್ನ ಕೊಠಡಿ, ಲ್ಯಾಬ್​ ಸೇರಿದಂತೆ ಸಾಮಾನ್ಯವಾಗಿ ಬಳಸುವ ಎಲ್ಲಾ ಆವರಣವನ್ನು ಸ್ಯಾನಿಟೈಸ್ ಮಾಡಬೇಕು.

– ಕ್ವಾರಂಟೈನ್​ ಕೇಂದ್ರಗಳನ್ನಾಗಿ ಬಳಸಿಕೊಂಡ ಶಾಲಾ, ಕಾಲೇಜುಗಳನ್ನ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಬೇಕು.

– ಗರಿಷ್ಠ 50%ನಷ್ಟು ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಯನ್ನು ಮಾತ್ರ ಶಾಲೆಗೆ ಕರೆಸಿಕೊಳ್ಳಬೇಕು.

– ಬಯೋಮೆಟ್ರಿಕ್ ಹಾಜರಾತಿ ಬದಲು ಕಾಂಟ್ಯಾಕ್ಟ್​ಲೆಸ್​ ಹಾಜರಾತಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು.

– ಸರತಿ ಸಾಲಿನಲ್ಲಿ ನಿಲ್ಲಲು ಕನಿಷ್ಠ 6 ಅಡಿ ಅಂತರದಲ್ಲಿ ಮಾರ್ಕ್ ಮಾಡಬೇಕು.

– ಸ್ಟಾಫ್ ರೂಂ ಮತ್ತು ಕಚೇರಿಗಳಲ್ಲೂ ದೈಹಿಕ ಅಂತರವನ್ನು ಕಾಪಾಡಬೇಕು.

– ಪಾಠ ಮಾಡಲು ಶಾಲೆ ಮತ್ತು ಕಾಲೇಜುಗಳ ಹೊರ ಆವರಣಗಳನ್ನ ಕೂಡ ಬಳಸಿಕೊಳ್ಳಬಹುದು.

– ಅಸೆಂಬ್ಲಿ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಅವಕಾಶವಿಲ್ಲ.

– ಜಿಮ್​ಗಳಲ್ಲಿ ಕೇಂದ್ರ ಆರೋಗ್ಯ ಇಲಾಖೆಯ ಮಾರ್ಗಸೂಚಿಯನ್ನು ಪಾಲಿಸಬೇಕು. ಸ್ವಿಮ್ಮಿಂಗ್​ ಪೂಲ್​ಗಳನ್ನ ಓಪನ್ ಮಾಡಲು ಅವಕಾಶವಿಲ್ಲ.

– ನೋಟ್​ಬುಕ್, ಪೆನ್​, ಪೆನ್ಸಿಲ್, ಎರೆಸರ್, ವಾಟರ್ ಬಾಟಲ್​ಗಳನ್ನ ಪರಸ್ಪರ ಹಂಚಿಕೊಳ್ಳುವಂತಿಲ್ಲ.

– ವಯಸ್ಸಾದ ಉದ್ಯೋಗಿಗಳು, ಗರ್ಭಿಣಿಯರು ಮತ್ತು ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರು ಹೆಚ್ಚು ಮುಂಜಾಗ್ರತೆ ವಹಿಸಬೇಕು. ಅವರು ವಿದ್ಯಾರ್ಥಿಗಳ ನೇರ ಸಂಪರ್ಕಕ್ಕೆ ಬರುವ ಕೆಲಸದಲ್ಲಿ ತೊಡಗದಂತೆ ನೋಡಿಕೊಳ್ಳಬೇಕು.

– ಅನಾರೋಗ್ಯಕ್ಕೆ ತುತ್ತಾದವರನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ಅವರ ಮನೆಯವರಿಗೆ ಮಾಹಿತಿ ನೀಡಬೇಕು.

-masthmagaa.com

Contact Us for Advertisement

Leave a Reply