ಸಕ್ರಿಯ ಪ್ರಕರಣಗಳಲ್ಲಿ ಕರ್ನಾಟಕವೇ ನಂಬರ್ 2.. ಎಷ್ಟು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಗೊತ್ತಾ..?

masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 47,704 ಜನರಿಗೆ ಹೊಸದಾಗಿ ಸೋಂಕು ತಗುಲಿದ್ದು, 654 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 14,83,157 ಆಗಿದೆ. ಮೃತಪಟ್ಟವರ ಸಂಖ್ಯೆ 33,425ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸತತ 5 ದಿನಗಳಿಂದ 47 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ.

ಕಳೆದ 24 ಗಂಟೆಗಳಲ್ಲಿ 35,176 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು 9,52,744 ಸೋಂಕಿತರು ಗುಣಮುಖರಾದಂತಾಗಿದ್ದು 4,96,988 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಶದಲ್ಲಿ ಗುಣಮುಖ ಪ್ರಮಾಣ 63.92% ಮತ್ತು ಸಾವಿನ ಪ್ರಮಾಣ 2.28% ಇದೆ. ಜುಲೈ 27ರಂದು ದೇಶದಲ್ಲಿ ದಾಖಲೆಯ 5.28 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದುವರೆಗೆ ಒಟ್ಟು 1.73 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷೆ ಮಾಡಲಾಗಿದೆ ಅಂತ ಐಸಿಎಂಆರ್ ಹೇಳಿದೆ.

ರಾಜ್ಯವಾರು ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಅನ್ನೋದು ಗಮನಾರ್ಹ. ಉಳಿದಂತೆ ತಮಿಳುನಾಡು ಮತ್ತು ಆಂಧ್ರಪ್ರದೇಶ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿದೆ.

ರಾಜ್ಯವಾರು ಸಕ್ರಿಯ ಪ್ರಕರಣಗಳು (ಟಾಪ್-10):

1. ಮಹಾರಾಷ್ಟ್ರ: 1.47 ಲಕ್ಷ ಪ್ರಕರಣ (13,883 ಸಾವು)

2. ಕರ್ನಾಟಕ: 61,000+ ಪ್ರಕರಣ (1,953 ಸಾವು)

3. ತಮಿಳುನಾಡು: 54,000+ ಪ್ರಕರಣ (3,571 ಸಾವು)

4. ಆಂಧ್ರಪ್ರದೇಶ: 51,000+ ಪ್ರಕರಣ (1,090 ಸಾವು)

5. ಉತ್ತರಪ್ರದೇಶ: 26,000+ ಪ್ರಕರಣ (1,456 ಸಾವು)

6. ಪಶ್ಚಿಮ ಬಂಗಾಳ: 19,000+ ಪ್ರಕರಣ (1,411 ಸಾವು)

7. ತೆಲಂಗಾಣ: 13,000+ ಪ್ರಕರಣ (480 ಸಾವು)

8. ಬಿಹಾರ: 13,000+ ಪ್ರಕರಣ (253 ಸಾವು)

9. ಗುಜರಾತ್: 13,000+ ಪ್ರಕರಣ (2,348 ಸಾವು)

10. ದೆಹಲಿ: 10,000+ ಪ್ರಕರಣ (3,853 ಸಾವು)

-masthmagaa.com

Contact Us for Advertisement

Leave a Reply