masthmagaa.com:

ನಮ್ಮ ದೇಶಕ್ಕೆ ಕೊರೋನಾನೇ ಬಂದಿಲ್ಲ, ನಾವು ಸೇಫಾಗಿದ್ದೀವಿ ಅಂತ ಹೇಳ್ತಿರೋ ಉತ್ತರ ಕೊರಿಯಾ ಈಗ ಕೊರೋನಾ ಲಸಿಕೆ ಬಗ್ಗೆ ಬೇರೆ ಬೇರೆ ದೇಶಗಳಿಂದ ಮಾಹಿತಿ ಕದಿಯಲು ಪ್ರಯತ್ನಿಸುತ್ತಿದೆ ಅಂತ ದಕ್ಷಿಣ ಕೊರಿಯಾ ಗಂಭೀರ ಆರೋಪ ಮಾಡಿದೆ. ಈ ಪ್ರಯತ್ನವನ್ನ ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆಗಳು ವಿಫಲಗೊಳಿಸಿದೆ ಅಂತಾನೂ ಹೇಳಿದೆ. ದಕ್ಷಿಣ ಕೊರಿಯಾ ಹೇಳಿರುವ ಬೇರೆ ಬೇರೆ ದೇಶಗಳ ಪಟ್ಟಿಯಲ್ಲಿ ಭಾರತ ಕೂಡ ಇದೆ ಅನ್ನೋದು ಗಮನಿಸಬೇಕಾದ ಸಂಗತಿ. ಕಳೆದ ವಾರ ಉತ್ತರ ಕೊರಿಯಾ ಮತ್ತು ರಷ್ಯಾ ಸರ್ಕಾರಗಳು ಲಸಿಕೆ ಅಭಿವೃದ್ಧಿಪಡಿಸುತ್ತಿರುವ 7 ಕಂಪನಿಗಳ ವೆಬ್​ಸೈಟ್​ ಹ್ಯಾಕ್​ ಮಾಡಿ ಮಾಹಿತಿ ಕದಿಯಲು ಪ್ರಯತ್ನಿಸಿವೆ. ಹೀಗೆ ಸೈಬರ್ ದಾಳಿಗೆ ಒಳಗಾದ ದೇಶಗಳಲ್ಲಿ ದಕ್ಷಿಣ ಕೊರಿಯಾ, ಭಾರತ, ಅಮೆರಿಕ, ಕೆನಡಾ ಮತ್ತು ಫ್ರಾನ್ಸ್ ದೇಶಗಳಿವೆ ಅಂತ ದಕ್ಷಿಣ ಕೊರಿಯಾ ಹೇಳ್ತಿದೆ. ಇತ್ತೀಚೆಗೆ ಅಮೆರಿಕದ ಮೊಡೆರ್ನಾ ಲಸಿಕೆಯ ಮಾಹಿತಿ ಕದಿಯಲು ಚೀನಾ ಮೂಲದ ಹ್ಯಾಕರ್ಸ್ ಪ್ರಯತ್ನಿಸಿದ್ರು ಅನ್ನೋ ಆರೋಪ ಕೇಳಿ ಬಂದಿತ್ತು. ಇದೀಗ ಕಿಮ್ ಜಾಂಗ್ ಉನ್ ಅವರ ಉತ್ತರ ಕೊರಿಯಾ ಮತ್ತು ರಷ್ಯಾ ಮೇಲೆ ಆರೋಪ ಕೇಳಿ ಬಂದಿದೆ.

-masthmagaa.com

Contact Us for Advertisement

Leave a Reply