masthmagaa.com:

ದೇಶದಲ್ಲಿ ಕೊರೋನಾ ಹಾವಳಿ ಹೆಚ್ಚಾಗ್ತಿದ್ದು ಕಳೆದ ಹಲವು ದಿನಗಳಿಂದ ಪ್ರತಿದಿನ ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸದ್ಯ ಸೋಂಕಿತರ ಸಂಖ್ಯೆ 28 ಸಾವಿರ ಸನಿಹ ಬಂದಿದ್ದು, 872 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದುವರೆಗೆ 6,185 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆಗೆ ಹೋಲಿಸಿದ್ರೆ ದೇಶದಲ್ಲಿ ಗುಣಮುಖರಾದವರ ಪ್ರಮಾಣ ಶೇ. 22ರಷ್ಟಿದೆ.

ಇನ್ನು ರಾಜ್ಯಗಳ ಪೈಕಿ (400ಕ್ಕೂ ಸೋಂಕಿತರಿರುವ ರಾಜ್ಯಗಳು) ಕೇರಳ ಅತಿ ಹೆಚ್ಚು 74 ಪರ್ಸೆಂಟ್ ರಿಕವರಿ ರೇಟ್ ಹೊಂದಿದೆ. ತಮಿಳುನಾಡು ಶೇ. 54ರಷ್ಟು ಗುಣಮುಖರೊಂದಿಗೆ ಎರಡನೇ ಸ್ಥಾನದಲ್ಲಿದೆ. ಇತ್ತೀಚಿನವರೆಗೆ 2ನೇ ಸ್ಥಾನದಲ್ಲಿದ್ದ ಕರ್ನಾಟಕ ಶೇ.36ರಷ್ಟು ರಿಕವರಿ ರೇಟ್​ನೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ. ಗುಜರಾತ್ ಕೇವಲ 9 ಪರ್ಸೆಂಟ್ ರಿಕವರಿ ರೇಟ್​ನೊಂದಿಗೆ ಕೊನೇ ಸ್ಥಾನದಲ್ಲಿದೆ.

ರಾಜ್ಯವಾರು ಗುಣಮುಖ ಪ್ರಮಾಣ:

1. ಕೇರಳ: 74%

2. ತಮಿಳುನಾಡು: 54%

3. ಕರ್ನಾಟಕ: 36%

4. ದೆಹಲಿ: 30%

5. ತೆಲಂಗಾಣ: 28%

6. ಜಮ್ಮು-ಕಾಶ್ಮೀರ: 26%

7. ರಾಜಸ್ಥಾನ: 24%

8. ಆಂಧ್ರಪ್ರದೇಶ: 21%

9. ಪಶ್ಚಿಮ ಬಂಗಾಳ‘: 16%

10. ಉತ್ತರಪ್ರದೇಶ: 15%

11. ಮಧ್ಯಪ್ರದೇಶ: 14%

12. ಮಹಾರಾಷ್ಟ್ರ: 13%

13. ಗುಜರಾತ್: 9%

-masthmagaa.com

Contact Us for Advertisement

Leave a Reply