ಟೆನ್ನಿಸ್ ಆಡಬೇಡ..ಕಪ್ಪಾಗ್ತೀಯ..ಸಾನಿಯಾಗೆ ಹೀಗಂದಿದ್ದು ಯಾರು ಗೊತ್ತಾ..?

ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ 8 ವರ್ಷ ಇದ್ದಾಗ ಟೆನ್ನಿಸ್ ಆಟದಂತೆ ಎಲ್ಲರೂ ಹೇಳಿದ್ದರಂತೆ.. ಹೀಗಂತ ಸ್ವತಃ ಸಾನಿಯಾ ಮಿರ್ಜಾ ಅವರೇ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ವಿಶ್ವ ಆರ್ಥಿಕ ರಂಗದಲ್ಲಿ ಮಹಿಳೆಯರು ಮತ್ತು ನೇತೃತ್ವದ ಸಾಮಥ್ರ್ಯ ಎಂಬ ಚರ್ಚಾಕೂಟದಲ್ಲಿ ಭಾಗಿಯಾಗಿ ಮಾತನಾಡಿದ್ರು. ಈ ವೇಳೆ ತಾನು ಜೀವನದಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಮಾತನಾಡಿ, ನಾನು ಸಣ್ಣ ಇರೋವಾಗ ಎಲ್ಲರೂ ಟೆನ್ನಿಸ್ ಆಡಬೇಡ, ನೀನು ಹೊರಗೆ ಟೆನ್ನಿಸ್ ಆಡಿದ್ರೆ ಕಪ್ಪಾಗ್ತೀಯಾ..ಆಮೇಲೆ ಯಾರೂ ನಿನ್ನನ್ನು ಮದುವೆಯಾಗೋದಿಲ್ಲ ಎಂದು ಹೇಳಿದ್ದರು. ಯುವತಿಯರು ನೋಡಲು ಸುಂದರವಾಗಿರಬೇಕು, ಬಿಳಿಯಾಗಿರಬೇಕು ಅನ್ನೋದು ಜನರ ತಲೆಯಲ್ಲಿ ಬಂದುಹೋಗಿದೆ. ಅದು ಯಾಕೆ ಅನ್ನೋದು ನನಗೂ ಗೊತ್ತಿಲ್ಲ. ಮೊದಲು ನಾವು ಈ ಸಂಸ್ಕøತಿಯನ್ನು ಬದಲಿಸಬೇಕು ಅಂದ್ರು.

ಇತ್ತೀಚೆಗಷ್ಟೇ ಸಾನಿಯಾ ಮಿರ್ಜಾ ತೂಕ ಇಳಿಸುವ ಮೂಲಕ ಸುದ್ದಿಯಾಗಿದ್ದರು. ಅವರು ಪ್ರೆಗ್ನೆನ್ಸಿ ಬಳಿಕ ದಪ್ಪವಾಗಿದ್ದರು. ನಂತರ ಕಠಿಣ ಶ್ರಮದಿಂದ 4 ತಿಂಗಳಲ್ಲಿ 26 ಕೆಜಿ ತೂಕ ಇಳಿಸಿದ್ದರು. ಈ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಫೋಟೋ ಹಾಕಿ, ನನಗೆ ಆಗಿದೆ ಅಂದ್ರೆ, ಎಲ್ಲರಿಗೂ ಅದು ಸಾಧ್ಯವಿದೆ ಎಂದರ್ಥ. ಎಲ್ಲರೂ ಪ್ರತಿದಿನ ವ್ಯಾಯಾಮ ಮಾಡಿ ತೂಕ ಇಳಿಸಿಕೊಳ್ಳಬೇಕು ಎಂದು ಕರೆಕೊಟ್ಟಿದ್ದರು.

Contact Us for Advertisement

Leave a Reply